ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2024ರ ಮೇ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ದೇಶದ ವಿವಿಧ ಬ್ಯಾಂಕ್‌ಗಳಿಗೆ 11 ದಿನಗಳ ಕಾಲ ರಜೆ ಇದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳು ಸೇರಿವೆ. ಆದ್ದರಿಂದ, ಗ್ರಾಹಕರು ಈ ರಜಾದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸಲು ಯೋಜಿಸಬೇಕು.
ಮೇ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ:
- ಮೇ 1 (ಬುಧವಾರ): ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ (ಮೇ ದಿನ) ಸಂದರ್ಭದಲ್ಲಿ ಮೇ 1 ರಂದು ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜಾದಿನವಾಗಿದೆ.
- ಮೇ 5 (ಭಾನುವಾರ) : ಮೇ 5 ಭಾನುವಾರವಾದ್ದರಿಂದ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ.
- ಮೇ 8 (ಬುಧವಾರ) : ರವೀಂದ್ರನಾಥ ಟ್ಯಾಗೋರ್ ಜಯಂತಿ (ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ)
- ಮೇ 10 (ಶುಕ್ರವಾರ) : ಅಕ್ಷಯ ತೃತೀಯ ಇರುವುದರಿಂದ ಈ ದಿನ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ.
- ಮೇ 11 (ಶನಿವಾರ) : ಈ ದಿನ ಮೇ ತಿಂಗಳ ಎರಡನೇ ಶನಿವಾರ. ಹಾಗಾಗಿ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ.
- ಮೇ 12 (ಭಾನುವಾರ) : ಸಾರ್ವತ್ರಿಕ ರಜೆ
- ಮೇ 16 (ಗುರುವಾರ) : ಸಿಕ್ಕಿಂ ರಾಜ್ಯ ರಚನೆ ದಿನ. ಅದಕ್ಕಾಗಿಯೇ ಸಿಕ್ಕಿಂನ ಬ್ಯಾಂಕ್‌ಗಳಿಗೆ ಅಂದು ರಜೆ ಇರುತ್ತದೆ.
- ಮೇ 19 (ಭಾನುವಾರ) : ಬ್ಯಾಂಕ್ ಸಾರ್ವತ್ರಿಕ ರಜೆ
- ಮೇ 23 (ಗುರುವಾರ): ಬುದ್ಧ ಪೂರ್ಣಿಮಾ ಇದ್ದು, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ಅಂದು ರಜೆ ಇರುತ್ತದೆ.
- ಮೇ 25 (ಶನಿವಾರ) : ನಜ್ರುಲ್ ಜಯಂತಿ, ನಾಲ್ಕನೇ ಶನಿವಾರ ಇದೆ. ಹೀಗಾಗಿ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ ಇದೆ.
- ಮೇ 26 (ಭಾನುವಾರ): ಭಾನುವಾರ ಸಾಮಾನ್ಯ ಬ್ಯಾಂಕ್ ರಜೆ.
ಬ್ಯಾಂಕ್ ರಜಾದಿನಗಳಲ್ಲಿ ವಹಿವಾಟು ಮಾಡುವುದು ಹೇಗೆ: ಮೇ ತಿಂಗಳಲ್ಲಿ 11 ದಿನಗಳವರೆಗೆ ಬ್ಯಾಂಕ್ಗಳು ಮುಚ್ಚಿದ್ದರೂ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ. ಅಲ್ಲದೇ, ಯುಪಿಐ ಮತ್ತು ಎಟಿಎಂ ಸೇವೆಗಳು ಸಹ ಎಂದಿನಂತೆ ನಡೆಯಲಿವೆ. ಆದ್ದರಿಂದ ನೀವು ಬ್ಯಾಂಕ್‌ಗಳಿಗೆ ಹೋಗದೆಯೇ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು.
2024ರ ಲೋಕಸಭೆ ಚುನಾವಣೆ ಹಿನ್ನೆಲೆ ಬ್ಯಾಂಕ್ ರಜೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯುವ ಪ್ರದೇಶಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆ ದಿನಾಂಕಗಳು ಯಾವುವು ಎಂದು ನೋಡೋಣ.
ಬ್ಯಾಂಕ್ಗಳು ರಜೆ ದಿನಾಂಕ:
- ಲೋಕಸಭೆ ಮೂರನೇ ಹಂತದ ಮತದಾನ- ಮೇ 7
- ಲೋಕಸಭೆ ನಾಲ್ಕನೇ ಹಂತದ ಮತದಾನ- ಮೇ 13
- ಲೋಕಸಭೆ ಐದನೇ ಹಂತದ ಮತದಾನ- ಮೇ 20
- ಲೋಕಸಭೆ ಆರನೇ ಹಂತದ ಮತದಾನ- ಮೇ 25