ಕರ್ನಾಟಕ

karnataka

ಮನೆಯಲ್ಲಿ ರಾಸಾಯನಿಕ ಪ್ರಯೋಗ ನಡೆಸುತ್ತಿದ್ದ ವೇಳೆ ಸ್ಫೋಟಗೊಂಡು ವಿದ್ಯಾರ್ಥಿ ಸಾವು - Student died in explosion

By ETV Bharat Karnataka Team

Published : Mar 22, 2024, 4:07 PM IST

ರಾಸಾಯನಿಕ ಸ್ಫೋಟಗೊಂಡ ರಭಸಕ್ಕೆ ಮನೆಯ ಗೋಡೆ ಕುಸಿದು ಬಿದ್ದಿದ್ದು, ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Student died in Lab Experiment explosion at home in Chennai
ಮನೆಯಲ್ಲಿ ರಾಸಾಯನಿಕ ಪ್ರಯೋಗ ನಡೆಸುತ್ತಿದ್ದ ವೇಳೆ ಸ್ಫೋಟಗೊಂಡು ವಿದ್ಯಾರ್ಥಿ ಸಾವು

ಚೆನ್ನೈ: ತನ್ನ ಮನೆಯಲ್ಲಿ ರಾಸಾಯನಿಕಗಳ ಪ್ರಯೋಗ ನಡೆಸುತ್ತಿದ್ದ ವೇಳೆ ಸ್ಫೋಟಗೊಂಡು 17 ವರ್ಷದ 12ನೇ ತರಗತಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ಚೆನ್ನೈನಲ್ಲಿ ನಡೆದಿದೆ.

ವಿದ್ಯಾರ್ಥಿಯು ಕೊಳತ್ತೂರು ಪೊಲೀಸ್​ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ತನ್ನದೇ ಶೈಕ್ಷಣಿಕ ಆಸಕ್ತಿಯಿಂದ ವಿದ್ಯಾರ್ಥಿ ತನ್ನ ಮನೆಯಲ್ಲಿ ಲಭ್ಯವಿದ್ದ ರಾಸಾಯನಿಕಗಳೊಂದಿಗೆ ಪ್ರಯೋಗ ನಡೆಸುತ್ತಿದ್ದ ವೇಳೆ ಸ್ಫೋಟಗೊಂಡಿದೆ. ಸ್ಫೋಟಗೊಂಡ ರಭಸಕ್ಕೆ ಮನೆಯ ಮೇಲ್ಛಾವಣಿ ವಿದ್ಯಾರ್ಥಿಯ ಮೇಲೆ ಕುಸಿದು ಬಿದ್ದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವಿಧಿವಿಜ್ಞಾನ ವಿಭಾಗದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ವಿದ್ಯಾರ್ಥಿ ಬಳಸಿದ ರಾಸಾಯನಿಕ ವಸ್ತುಗಳನ್ನು ಪಡೆದು, ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ತನ್ನ ಶೈಕ್ಷಣಿಕ ಆಸಕ್ತಿಯಿಂದ ಲಭ್ಯ ಇರುವ ರಾಸಾಯನಿಕ ಪದಾರ್ಥಗಳೊಂದಿಗೆ ತನ್ನ ನಿವಾಸದಲ್ಲಿ ನಿರ್ಲಕ್ಷ್ಯದಿಂದ ಕೆಲವು ಪ್ರಯೋಗಗಳನ್ನು ನಡೆಸಿದ್ದಾನೆ. ಸ್ಫೋಟಕ್ಕೆ ಮನೆಯ ಗೋಡೆ ಕುಸಿದು ಮೇಲೆ ಬಿದ್ದ ಕಾರಣ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಸಿಆರ್​ಪಿಸಿ ಸೆಕ್ಷನ್​ 174ರ ಅಡಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ದೇಶದ ಅತೀ ದೊಡ್ಡ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿತ, ಓರ್ವ ಸಾವು, ಅನೇಕರಿಗೆ ಗಾಯ - Bihar Bridge Collapsed

ABOUT THE AUTHOR

...view details