ಕರ್ನಾಟಕ

karnataka

ಭೀಕರ ರಸ್ತೆ ಅಪಘಾತ: ಬಾಲಕಿ ಸೇರಿ ಆರು ಮಂದಿ ದುರ್ಮರಣ - Six killed in accident in Telangana

By PTI

Published : Apr 25, 2024, 9:34 AM IST

ತೆಲಂಗಾಣದ ಸೂರ್ಯಪೇಟ್​​​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

six-killed-in-road-accident-in-telangana
ಭೀಕರ ರಸ್ತೆ ಅಪಘಾತ: ಬಾಲಕಿ ಸೇರಿ ಆರು ಮಂದಿ ದುರ್ಮರಣ

ಸೂರ್ಯಪೇಟ್ (ತೆಲಂಗಾಣ): ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಲಕಿ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣ ರಾಜಧಾನಿ ಹೈದರಾಬಾದ್‌ನಿಂದ ಸುಮಾರು 180 ಕಿಮೀ ದೂರದಲ್ಲಿರುವ ಈ ಜಿಲ್ಲೆಯ ಕೊಡಾದ ಪಟ್ಟಣದ ಬಳಿ ಈ ಅಪಘಾತ ಸಂಭವಿಸಿದೆ. ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ರಿಪೇರಿಗಾಗಿ ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಸಂತ್ರಸ್ತರನ್ನು ಕರೆದೊಯ್ಯುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎಂದು ಕೊಡದ ಡಿಎಸ್‌ಪಿ ಶ್ರೀಧರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಗುರುವಾರ ಮುಂಜಾನೆ ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಒಟ್ಟು 10 ಮಂದಿ ಇದ್ದರು. ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನು ಓದಿ:ಈ ಹತ್ತು ಲಕ್ಷಣಗಳು ಕಾಣಿಸಿಕೊಂಡಿವೆಯಾ? ಹಾಗಾದರೆ ಅದು ಮಲೇರಿಯಾ ಅನ್ನೋದು ಕನ್ಫರ್ಮ್​​: ಏನು ಆ ಲಕ್ಷಣಗಳು? - World Malaria Day 2024

ABOUT THE AUTHOR

...view details