ಕರ್ನಾಟಕ

karnataka

NEET UG 2024: ನಾಳೆಯೇ ಪರೀಕ್ಷೆ, ಹೆಚ್ಚುತ್ತಲೇ ಸಾಗ್ತಿದೆ ಪರೀಕ್ಷಾರ್ಥಿಗಳ ಸಂಖ್ಯೆ; ಹೇಗಿರಲಿದೆ ಈ ಬಾರಿಯ ಫಲಿತಾಂಶ? - TOMORROW NEET UG 2024 EXAM

By ETV Bharat Karnataka Team

Published : May 4, 2024, 8:31 AM IST

NEET UG 2024: NEET-UG ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಾ ಸಾಗುತ್ತಿದೆ . ಈ ಬಾರಿಯೂ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳ ವಿಶ್ಲೇಷಣೆ ಪ್ರಕಾರ 56 ಪ್ರತಿಶತದಷ್ಟು ಅಭ್ಯರ್ಥಿಗಳು ಅರ್ಹತಾ ಕಟ್‌ಆಫ್‌ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.

neet-ug-2024-
NEET UG 2024: ನಾಳೆಯೇ ಪರೀಕ್ಷೆ (IANS)

ಕೋಟಾ, ರಾಜಸ್ಥಾನ: ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆ, NEET UG 2024 ಅನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮೇ 5 ರಂದು ಆಯೋಜಿಸುತ್ತಿದೆ. ನಾಳೆ ದೇಶ - ವಿದೇಶದ ಸುಮಾರು 5 ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಕಳೆದ ಕೆಲ ವರ್ಷಗಳಿಂದ ಸತತವಾಗಿ NEET ಯುಜಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಲೇ ಸಾಗುತ್ತಿದೆ. ಈ ಬಾರಿಯೂ ಆ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ.

ಈ ಹಿಂದಿನ ಅಂಕಿ- ಅಂಶ ಏನು ಹೇಳುತ್ತಿದೆ?: 2022ರಲ್ಲಿ 17.64 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರೆ. ಈ ಪೈಕಿ 9.9 ಲಕ್ಷ ಮಂದಿ ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹತೆ ಪಡೆದುಕೊಂಡಿದ್ದರು ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ತಿಳಿಸಿದ್ದಾರೆ. ಶೇ 56.12ರಷ್ಟು ವಿದ್ಯಾರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇನ್ನು 2023 ರ ನೀಟ್​ ಪರೀಕ್ಷೆಗೆ ಸುಮಾರು 20.38 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 11.45 ಲಕ್ಷ ಮಂದಿ ಅರ್ಹತೆ ಕೂಡಾ ಪಡೆದುಕೊಂಡಿದ್ದರು. ಇದರ ಪ್ರಮಾಣ ಶೇ 56.18ರಷ್ಟಿತ್ತು.

2024 ರ ಪರೀಕ್ಷೆಗೆ 25 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ ಕೊಂಚ ಕಡಿಮೆ ಆಗಬಹುದು. ಸರಿ ಸುಮಾರು 13 ರಿಂದ 14 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆಯಬಹುದು.

ದೇವ್ ಶರ್ಮಾ ಅವರು ಹೇಳುವ ಪ್ರಕಾರ, 20 23 ರಲ್ಲಿ ರಾಜಸ್ಥಾನದಿಂದ ಸುಮಾರು 1.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1 ಲಕ್ಷ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಈ ಅರ್ಹ ಅಭ್ಯರ್ಥಿಗಳ ಸಂಖ್ಯೆಯನ್ನು ಆಧರಿಸಿ, ರಾಜಸ್ಥಾನ ರಾಜ್ಯವು 2023 ರಲ್ಲಿ 3ನೇ ಸ್ಥಾನದ ಪಡೆದುಕೊಂಡಿತ್ತು. ಉತ್ತರಪ್ರದೇಶ ನಂಬರ್​ ಸ್ಥಾನ ಪಡೆದಿದ್ದರೆ, ಮಹಾರಾಷ್ಟ್ರ 2ನೇ ಸ್ಥಾನದಲ್ಲಿತ್ತು.

2023 ರಲ್ಲಿ ಉತ್ತರ ಪ್ರದೇಶದಿಂದ ಗರಿಷ್ಠ 1.37 ಲಕ್ಷ ಅಭ್ಯರ್ಥಿಗಳು ನೀಟ್​​​​ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇನ್ನು ಮಹಾರಾಷ್ಟ್ರದಿಂದ 1.31 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರೆ, ರಾಜಸ್ಥಾನದ 1 ಲಕ್ಷ ಅಭ್ಯರ್ಥಿಗಳು ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು . ಯುಪಿಯ ಯಶಸ್ಸಿನ ಶೇಕಡಾವಾರು ಶೇ 51ರಷ್ಟಿದ್ದರೆ, ಮಹಾರಾಷ್ಟ್ರದ ಪ್ರಮಾಣ ಶೇ 47ರಷ್ಟಾಗಿದೆ.

ಈ ಮೂರರಲ್ಲಿ ರಾಜಸ್ಥಾನ ಶೇ 67.71 ಅಂಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ತೋರಿತ್ತು. ರಾಜಸ್ಥಾನದ ಯಶಸ್ಸಿನ ಶೇಕಡಾವಾರು ಹೆಚ್ಚಾಗುತ್ತಿರುವ ವಿಧಾನವನ್ನು ಆಧರಿಸಿ ಹೇಳುವುದಾದರೆ, ಶೀಘ್ರದಲ್ಲೇ ಅಗ್ರಸ್ಥಾನವನ್ನು ತಲುಪುವ ಸಾಧ್ಯತೆಯಿದೆ.


ಇದನ್ನು ಓದಿ:NEET UG 2024 ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?: ಏನು ಮಾಡಬೇಕು, ಮಾಡಬಾರದು, ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ! - NTA has issued admit card

ABOUT THE AUTHOR

...view details