ಕರ್ನಾಟಕ

karnataka

ದೇಶದ ಅತೀ ದೊಡ್ಡ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿತ, ಓರ್ವ ಸಾವು, ಅನೇಕರಿಗೆ ಗಾಯ - Bihar Bridge Collapsed

By ETV Bharat Karnataka Team

Published : Mar 22, 2024, 1:23 PM IST

Bridge collapsed in Bihar: ಬಿಹಾರದ ಸುಪೌಲ್‌ನಲ್ಲಿ ನಿರ್ಮಿಸಲಾಗುತ್ತಿರುವ ದೇಶದ ಅತೀ ದೊಡ್ಡ ಸೇತುವೆಯ ಒಂದು ಭಾಗ ಕುಸಿದಿದೆ. ಮೂರು ಪಿಲ್ಲರ್‌ಗಳ ಗರ್ಡರ್‌ ಬಿದ್ದಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ

INDIA BIGGEST BRIDGE  BAKOUR BRIDGE  INDIAS BIGGEST BRIDGE IN BIHAR
ದೇಶದ ಅತಿ ದೊಡ್ಡ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿತ

ದೇಶದ ಅತೀ ದೊಡ್ಡ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿತ

ಸುಪೌಲ್(ಬಿಹಾರ):ನಗರದಲ್ಲಿ ನಿರ್ಮಿಸಲಾಗುತ್ತಿರುವ ದೇಶದ ಅತೀ ದೊಡ್ಡ ಬಾಕೂರ್ ಸೇತುವೆಯ ಒಂದು ಭಾಗದ ಮೂರು ಪಿಲ್ಲರ್ ಗರ್ಡರ್‌ಗಳು ಇಂದು ದಿಢೀರ್ ಕುಸಿದು ಬಿದ್ದಿವೆ. ಬೆಳಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ. ದುರಂತದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ. ಈ ಸೇತುವೆ ನಿರ್ಮಾಣಕ್ಕೆ 1,200 ಕೋಟಿ ರೂ. ವ್ಯಯಿಸಲಾಗಿದೆ.

ಹಲವು ಕಾರ್ಮಿಕರು ಸಿಲುಕಿರುವ ಶಂಕೆ: ಕೋಸಿ ನದಿಗೆ ಅಡ್ಡಲಾಗಿ ಭಾರತ್ ಮಾಲಾ ಯೋಜನೆಯಡಿ ಈ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪಿಲ್ಲರ್ ಸಂಖ್ಯೆ 153 ಮತ್ತು 154ರ ನಡುವಿನ 3ನೇ ಭಾಗವು ಕ್ರೇನ್‌ನಿಂದ ಸಡಿಲಗೊಂಡು ಬಿದ್ದಿದೆ. ಈ ಸಂದರ್ಭದಲ್ಲಿ ಸೇತುವೆಯ ಮೇಲೆ ಪಶ್ಚಿಮ ಬಂಗಾಳದ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

"ನಾವು ಈಗಾಗಲೇ 11 ಜನರನ್ನು ರಕ್ಷಿಸಿದ್ದೇವೆ. ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಎಲ್ಲಾ ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದೆ. ಕ್ರೇನ್​ ಮೂಲಕ ರಕ್ಷಣಾ ಕಾರ್ಯ ಸಾಗುತ್ತಿದೆ" ಎಂದು ಜಿಲ್ಲಾಧಿಕಾರಿ ಕೌಶಲ್ ಕುಮಾರ್ ಹೇಳಿದರು.

ದೇಶದ ಅತಿ ದೊಡ್ಡ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿತ

ಸೇತುವೆ ನಿರ್ಮಾಣ ಅಧಿಕಾರಿಗಳು ನಾಪತ್ತೆ: ಅಪಘಾತದ ನಂತರ ಸೇತುವೆ ನಿರ್ಮಾಣದ ಹೊಣೆ ಹೊತ್ತ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗಾಯಾಳುಗಳನ್ನು ಬೈಕ್‌ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದೆವು. ಇಲ್ಲಿಯವರೆಗೆ 15ರಿಂದ 20 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಜನರ ಗುಂಪು: ಸುಮಾರು 35-40 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಪೊಲೀಸ್ ಮತ್ತು ರಕ್ಷಣಾ ತಂಡಗಳು ತಡವಾಗಿ ಸ್ಥಳಕ್ಕೆ ತಲುಪಿದವು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

"ಸೇತುವೆಯ ಗುಣಮಟ್ಟ ಕಳಪೆಯಾಗಿದೆ. ಈ ಬಗ್ಗೆ ಮೊದಲಿನಿಂದಲೂ ದೂರು ನೀಡುತ್ತಿದ್ದೆವು. ಆದರೆ ನಾವು ಸುಲಿಗೆ ಮಾಡಲು ಒತ್ತಾಯಿಸುತ್ತಿದ್ದೇವೆ ಎಂದು ಸಂಬಂಧಪಟ್ಟವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದರು. ಯಾರಾದರೂ ಧ್ವನಿ ಎತ್ತಿದರೆ ಅವರ ವಿರುದ್ಧ ಪೊಲೀಸರನ್ನು ಕಳುಹಿಸುತ್ತಿದ್ದರು. ಆಗ ಎಲ್ಲರೂ ಮಾತನಾಡುವುದನ್ನು ನಿಲ್ಲಿಸಿದರು. ಸುಮಾರು 35-40 ಜನರು ಮೃತಪಟ್ಟಿರುವ ಶಂಕೆಯಿದೆ. ಆದರೆ ಕಂಪನಿಯಿಂದ ಒಬ್ಬ ವ್ಯಕ್ತಿಯೂ ಇಲ್ಲಿಗೆ ಬಂದಿಲ್ಲ. ನಾವು 15-20 ಜನರನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದೆವು" ಎಂದು ಸ್ಥಳೀಯರಾದ ಸುರೇಂದ್ರ ಪ್ರಸಾದ್ ಯಾದವ್ ಹೇಳಿದರು.

ದೇಶದ ಅತಿ ದೊಡ್ಡ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿತ

ಸೇತುವೆಯಲ್ಲಿ ಒಟ್ಟು 171 ಪಿಲ್ಲರ್‌ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಸುಮಾರು 150ಕ್ಕೂ ಹೆಚ್ಚು ಪಿಲ್ಲರ್‌ಗಳು ತಲೆ ಎತ್ತಿವೆ. ಅಪ್ರೋಚ್ ರಸ್ತೆ ಕಾಮಗಾರಿ ಇನ್ನಷ್ಟೇ ಆಗಬೇಕಿದೆ. ಮಧುಬನಿ ಮತ್ತು ಸುಪೌಲ್ ನಡುವೆ ಬಾಕೂರ್ ಸೇತುವೆ ಕಾರ್ಯ ಪ್ರಗತಿಯಲ್ಲಿದೆ. ಅಸ್ಸೋಂನ ಭೂಪೇನ್ ಹಜಾರಿಕಾ ಸೇತುವೆಗಿಂತ ಇದು ಒಂದು ಕಿಲೋಮೀಟರ್ ಉದ್ದವಿದೆ.

ಸೇತುವೆಯ ಉದ್ದ 10.2 ಕಿ.ಮೀ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸೇತುವೆ ನಿರ್ಮಿಸುತ್ತಿದೆ. ಇದರ ಉದ್ದ ಸುಮಾರು 10.2 ಕಿಲೋಮೀಟರ್. ಬೃಹತ್ ಸೇತುವೆಯ ನಿರ್ಮಾಣದಿಂದ ಸುಪೌಲ್ ಮತ್ತು ಮಧುಬನಿ ನಡುವಿನ ಅಂತರವು 30 ಕಿಲೋಮೀಟರ್‌ಗಳಿಗೆ ಕಡಿಮೆಯಾಗುತ್ತದೆ. ಈ ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಇಲ್ಲಿ ಸಂಪರ್ಕ ಕಡಿತಗೊಳ್ಳುತ್ತಿತ್ತು. ಅಷ್ಟೇ ಅಲ್ಲ, 100 ಕಿಲೋಮೀಟರ್ ದೂರ ಕ್ರಮಿಸಬೇಕಾಗುತ್ತಿತ್ತು.

ದೇಶದ ಅತಿ ದೊಡ್ಡ ಸೇತುವೆ ನಿರ್ಮಾಣ ಹಂತದಲ್ಲಿ ಕುಸಿತ

ಇನ್ನು, ಬಿಹಾರದಲ್ಲಿ ಇಂತಹ ಸೇತುವೆ ಕುಸಿತ ಹೊಸದೇನಲ್ಲ. ಈ ಹಿಂದೆಯೂ ಸೇತುವೆ ಕುಸಿದು ಅವಘಡಗಳು ಸಂಭವಿಸಿರುವ ಅನೇಕ ಘಟನೆಗಳಿವೆ.

ಇದನ್ನೂ ಓದಿ:ಬರದಲ್ಲೂ ಜಲಕ್ರಾಂತಿ: 'ಆಧುನಿಕ ಭಗೀರಥ' ಶಿವಾಜಿ ಕಾಗಣಿಕರ್​ ಪರಿಶ್ರಮಕ್ಕೆ ಭರಪೂರ ನೀರು - Belagavi Water Revolution

ABOUT THE AUTHOR

...view details