ಕರ್ನಾಟಕ

karnataka

ಮನೆ ತನ್ನ ಹೆಸರಿಗೆ ನೋಂದಾಯಿಸುವಂತೆ ಪತಿಗೆ ಸರಪಳಿಯಿಂದ ಕಟ್ಟಿ ಚಿತ್ರಹಿಂಸೆ ಕೊಟ್ಟ ಪತ್ನಿ - Husband was chained

By ETV Bharat Karnataka Team

Published : May 4, 2024, 1:58 PM IST

ಮನೆಯನ್ನು ತನ್ನ ಹೆಸರಿಗೆ ಮಾಡುವಂತೆ ಪತ್ನಿಯೇ ಪತಿಗೆ ಪೀಡಿಸಿ ಚಿತ್ರ ಹಿಂಸೆ ನೀಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮನೆ ತನ್ನ ಹೆಸರಿಗೆ ನೋಂದಾಯಿಸುವಂತೆ ಪತಿಗೆ ಸರಪಳಿಯಿಂದ ಕಟ್ಟಿ ಚಿತ್ರಹಿಂಸೆ ಕೊಟ್ಟ ಪತ್ನಿ
ಮನೆ ತನ್ನ ಹೆಸರಿಗೆ ನೋಂದಾಯಿಸುವಂತೆ ಪತಿಗೆ ಸರಪಳಿಯಿಂದ ಕಟ್ಟಿ ಚಿತ್ರಹಿಂಸೆ ಕೊಟ್ಟ ಪತ್ನಿ (ETV Bharat)

ಮೇಡ್ಚಲ್​ (ತೆಲಂಗಾಣ): ಆಸ್ತಿಗಾಗಿ ಪತ್ನಿಯೇ ಪತಿಯನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಮನೆಯ ಕೋಣೆಯೊಂದರಲ್ಲಿ ಬಂಧಿಸಿರುವ ಘಟನೆ ​ಮೇಡ್ಚಲ ಜಿಲ್ಲೆಯ ಘಟ್‌ಕೇಸರ್‌ನಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ಘಟಕೇಸರ್‌ನ ಅಂಬೇಡ್ಕರ್‌ ನಗರದ ಕೇಂದ್ರೀಯ ಒಕ್ಕೂಟದ ಪಟ್ಟಿ ನರಸಿಂಹ ಎಂಬಾತನ ಪತ್ನಿ ಭಾರತಮ್ಮ ಕೃತ್ಯ ಎಸಗಿದ್ದಾಳೆ.

ಘಟನೆ ವಿವರ:ನರಸಿಂಹ ಅವರು ತನ್ನ ಪತ್ನಿಯ ಹೆಸರಿನಲ್ಲಿದ್ದ ಜಮೀನಿನಲ್ಲಿ ಸಾಲ ಮಾಡಿ ಮನೆ ಕಟ್ಟಿಸಿದ್ದರು. ಮಾಡಿದ ಸಾಲವನ್ನು ತೀರಿಸಲು ನರಸಿಂಹ ತನ್ನ ಹೆಸರಿನಲ್ಲಿದ್ದ ಜಮೀನು ಮಾರಾಟ ಮಾಡುವುದಾಗಿ ಪತ್ನಿಗೆ ತಿಳಿಸಿದ್ದಾನೆ. ಇದಕ್ಕೆ ಒಪ್ಪದ ಪತ್ನಿ ಜಗಳವಾಡಿದ್ದಾಳೆ. ಅಂದಿನಿಂದ ದಂಪತಿ ನಡುವೆ ಜಗಳ ನಡೆಯುತ್ತಲೇ ಇದೆ. ಇದರಿಂದ ನೊಂದ ನರಸಿಂಹ ಕಳೆದ ವರ್ಷ ಮನೆಯನ್ನೂ ತೊರೆದಿದ್ದ.

ಕಳೆದ ತಿಂಗಳು 30 ರಂದು ಭಾರತಮ್ಮ ಅವರಿಗೆ ತನ್ನ ಪತಿ ನರಸಿಂಹ, ಯಾದಾದ್ರಿ ಭುವನಗಿರಿ ಜಿಲ್ಲೆಯ ಪಡಮಟಿ ಸೋಮರಂನಲ್ಲಿರುವ ವಿಷಯ ತಿಳಿದು ಬರುತ್ತದೆ. ಆಗ ಭಾರತಮ್ಮ ತನ್ನ ಮಕ್ಕಳೊಂದಿಗೆ ಹೋಗಿ ಮನೆಗೆ ತನ್ನ ಗಂಡನನ್ನು ಬಲವಂತವಾಗಿ ಕರೆತಂದಿದ್ದಾಳೆ. ಬಳಿಕ ನರಸಿಂಹನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಕೋಣೆಯಲ್ಲಿ ಬಂಧಿಸಿದ್ದಾಳೆ.

ಮನೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡುವಂತೆ ಗಂಡನಿಗೆ ಚಿತ್ರಹಿಂಸೆ ನೀಡಿದ್ದಾಳೆ. ಈ ದೃಶ್ಯವನ್ನು ಸ್ಥಳೀಯರು ರಹಸ್ಯವಾಗಿ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಮಾಜಿ ಎಂಪಿಟಿಸಿ ಸದಸ್ಯ ಮಹೇಶ್ ಅವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಬಂಧಿತ ನರಸಿಂಹನನ್ನು ಬಿಡುಗಡೆ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರನ್ನು ಕಂಡು ನರಸಿಂಹ ಅಳಲು ತೋಡಿಕೊಂಡಿದ್ದಾರೆ. ಆತನನ್ನು ಸರಪಳಿಗಳಿಂದ ಕಟ್ಟಿ ಮೂರು ದಿನಗಳ ಕಾಲ ಚಿತ್ರಹಿಂಸೆ ನೀಡಲಾಗಿದೆ ಎಂದು ತನ್ನನ್ನು ರಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾನೆ.

ಸದ್ಯ ಪತ್ನಿ ಭಾರತಮ್ಮ, ಪುತ್ರರಾದ ಗಣೇಶ್, ರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಸಿಐ ಸೈದುಲ್ ತಿಳಿಸಿದ್ದಾರೆ.

ಇದನ್ನೂ ಓದಿ:₹2 ಕೋಟಿ ಹಣ ತವರು ಮನೆಗೆ ಕಳುಹಿಸಿದ ಹೆಂಡತಿ ಕೊಲೆ ಮಾಡಿದ ಗಂಡ - Husband Killed Wife

ABOUT THE AUTHOR

...view details