ಕರ್ನಾಟಕ

karnataka

ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ತೆಗದು ಹಾಕಿದ್ದ ಭಾರತೀಯ ಆ್ಯಪ್​ಗಳ ಮರು ಸೇರ್ಪಡೆಗೆ ಒಪ್ಪಿಗೆ: ಅಶ್ವಿನಿ ವೈಷ್ಣವ್

By ETV Bharat Karnataka Team

Published : Mar 5, 2024, 10:58 PM IST

ಗೂಗಲ್ ಕಳೆದ ವಾರ ತನ್ನ ಪ್ಲೇಸ್ಟೋರ್‌ನಿಂದ ತೆಗೆದುಹಾಕಿದ್ದ ಆ್ಯಪ್​ಗಳನ್ನು ಮರು ಸೇರ್ಪಡೆ ಗೊಳಿಸಲು ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​ ಹೇಳಿದ್ದಾರೆ.

Eಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ತೆಗದು ಹಾಕಿದ್ದ ಭಾರತೀಯ ಆ್ಯಪ್​ಗಳ ಮರು ಸೇರ್ಪಡೆಗೆ ಒಪ್ಪಿಗೆ: ಅಶ್ವಿನಿ ವೈಷ್ಣವ್
ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ತೆಗದು ಹಾಕಿದ್ದ ಭಾರತೀಯ ಆ್ಯಪ್​ಗಳ ಮರು ಸೇರ್ಪಡೆಗೆ ಒಪ್ಪಿಗೆ: ಅಶ್ವಿನಿ ವೈಷ್ಣವ್

ನವದೆಹಲಿ:ಗೂಗಲ್ (Google) ತನ್ನ ಪ್ಲೇಸ್ಟೋರ್‌ನಿಂದ (Play Store) ತೆಗೆದುಹಾಕಿದ್ದ ಭಾರತೀಯ ಕೆಲ ಅಪ್ಲಿಕೇಶನ್‌ಗಳನ್ನು (Apps) ಇದೀಗ ಮರುಸೇರ್ಪಡೆ ಗೊಳಿಸಲು ಒಪ್ಪಿಕೊಂಡಿರುವುದಾಗಿ ಕೇಂದ್ರ ಐಟಿ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಅವರ ಉಪಸ್ಥಿತಿಯಲ್ಲಿ ಗೂಗಲ್ ಮತ್ತು ಸ್ಟಾರ್ಟ್ಅಪ್ ಕಂಪನಿಗಳ ನಡುವೆ ಸುದೀರ್ಘ ಚರ್ಚೆಗಳು ನಡೆದಿದ್ದು, ಈ ಸಭೆಯಲ್ಲಿ ಶುಲ್ಕ ಪಾವತಿ ಬಗ್ಗೆ ಎರಡೂ ಕಡೆಯಿಂದ ಒಮ್ಮತ ಸಿಕ್ಕಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಿಲ್ಲಿಂಗ್ ಪಾವತಿ​ ​ನೀತಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಆಶೀಸುತ್ತೇನೆ ಅಲ್ಲದೇ ದೇಶದ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಗೂಗಲ್ ಬೆಂಬಲ ನೀಡಲಿದೆ ಎಂದೂ ಹೇಳಿದರು.

ಗೂಗಲ್​ ಬಿಲ್ಲಿಂಗ್​ ನೀತಿ ಅನುಸರಿಸದ ಕಾರಣ ಕಳೆದ ಶುಕ್ರವಾರ Shaadi.com, Matrimony.com, Bharat Matrimony, Kuku FM, Naukri.com, 99acres ಸೇರಿದಂತೆ 10 ಆ್ಯಪ್‌ಗಳನ್ನು ಗೂಗಲ್​ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿತ್ತು. ಬಳಿಕ ಎರಡು ಲಕ್ಷಕ್ಕೂ ಹೆಚ್ಚು ಭಾರತೀಯ ಆಪ್ ಡೆವಲಪರ್‌ಗಳು ಗೂಗಲ್ ಪ್ಲೇ ಸ್ಟೋರ್ ಬಳಸುತ್ತಿದ್ದಾರೆ ಎಂದು ಗೂಗಲ್ ಹೇಳಿತ್ತು. ಕಂಪನಿ ನಿಯಮದ ಪ್ರಕಾರ ಎಲ್ಲಾ ಡೆವಲಪರ್‌ಗಳಿಗೆ ಬಿಲ್ಲಿಂಗ್​ ನೀತಿ ಒಂದೇ ಇದೆ. ಆದರೆ, ಕೆಲ ಆ್ಯಪ್​ ಡೆವಲಪರ್‌ಗಳು ಬಿಲ್ಲಿಂಗ್ ನೀತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಅವರಿಗೆ ಹಲವು ಬಾರಿ ಎಚ್ಚರಿಸಿದರೂ ಎಚ್ಚೆತ್ತುಕೊಂಡಿಲ್ಲ. ಹಾಗಾಗಿ ಪ್ಲೇ ಸ್ಟೋರ್​ನಿಂದ ಕೆಲ ಅಪ್ಲಿಕೇಶನ್​ಗಳನ್ನು ತೆಗೆದುಹಾಕಲು ನಿರ್ಧರಿಸಲಾಯಿತು ಎಂದು ಹೇಳಿತ್ತು.

ಗೂಗಲ್​ ಮತ್ತು ಆ್ಯಪ್​ ಡೆವಲಪರ್‌ಗಳ ನಡುವಿನ ಶುಲ್ಕ ಪಾವತಿ ವಿವಾದವು ಬಹಳ ಸಮಯದಿಂದ ನಡೆಯುತ್ತಲೇ ಇದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಕಳೆದ ತಿಂಗಲು ಫೆ.9 ರಂದು ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು.

ಇದನ್ನೂ ಓದಿ:ಸಿಕ್ಕಾಪಟ್ಟೆ ಬಡ್ಡಿ ಪೀಕುವ 17 'ಸ್ಪೈ ಲೋನ್' ಆ್ಯಪ್​ ತೆಗೆದು ಹಾಕಿದ ಗೂಗಲ್

ABOUT THE AUTHOR

...view details