ಕರ್ನಾಟಕ

karnataka

ಇಡಿ ವಿಚಾರಣೆಗೆ ಕೇಜ್ರಿವಾಲ್​ ಹಾಜರಾಗುವುದು ಡೌಟ್​: ಜಾರಿ ನಿರ್ದೇಶನಾಲಯದ ಮುಂದಿನ ನಡೆ ಏನು?

By ETV Bharat Karnataka Team

Published : Feb 19, 2024, 9:15 AM IST

ದೆಹಲಿ ಮದ್ಯೆ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಫೆ.19 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದೆ. ಆದರೆ, ಇಂದೂ ಕೂಡಾ ಸಿಎಂ ಕೇಜ್ರಿವಾಲ್​ ವಿಚಾರಣೆಗೆ ಹಾಜರಾಗುವುದು ಡೌಟ್ ಎನ್ನಲಾಗಿದೆ. ಅವರು ಬಜೆಟ್​ ಅಧಿವೇಶನದಲ್ಲಿ ಬ್ಯೂಸಿ ಆಗಿರುವುದರಿಂದ ವಿಚಾರಣೆಗೆ ಹಾಜರಾಗಲಿಕ್ಕಿಲ್ಲ ಎನ್ನಲಾಗಿದೆ.

doubt-over-cm-arvind-kejriwal-on-appearing-before-ed
ಇಡಿ ವಿಚಾರಣೆಗೆ ಕೇಜ್ರಿವಾಲ್​ ಹಾಜರಾಗುವುದು ಡೌಟ್​: ಜಾರಿ ನಿರ್ದೇಶನಾಲಯದ ಮುಂದಿನ ನಡೆ ಏನು?

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಸಮನ್ಸ್​ ನೀಡುತ್ತಲೇ ಇದೆ. ಆದರೆ, ಕೇಜ್ರಿವಾಲ್ ಇಡಿ ಕೇಂದ್ರ ಕಚೇರಿಗೆ ಭೇಟಿ ನೀಡುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ದೆಹಲಿ ವಿಧಾನಸಭಾ ಅಧಿವೇಶನದ ಕಲಾಪಗಳು ನಡೆಯುತ್ತಿದ್ದು, ಬಜೆಟ್​ ಅಧಿವೇಶನದಲ್ಲಿ ಸಿಎಂ ಬ್ಯೂಸಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ ದೆಹಲಿ ಸಿಎಂ, ಬಜೆಟ್ ಅಧಿವೇಶನ ನಡೆಯುತ್ತಿದ್ದು, ಅದರಲ್ಲಿ ತಾವು ಬ್ಯುಸಿಯಾಗಿದ್ದು ಮುಂದಿನ ವಿಚಾರಣೆಗೆ ಖಂಡಿತ ಹಾಜರಾಗುತ್ತೇನೆ ಎಂದು ಕೋರ್ಟ್​ಗೆ ತಿಳಿಸಿದ್ದರು.

ಅವರ ವಾದವನ್ನು ಆಲಿಸಿದ್ದ ನ್ಯಾಯಾಲಯ, ಕೋರ್ಟ್​ ಗೆ ಹಾಜರಾಗುವುದರಿಂದ ವಿನಾಯಿತಿ ನೀಡಿತ್ತು. ಹೀಗಾಗಿ ಇಂದು ಇಡಿ ಪ್ರಧಾನ ಕಚೇರಿಗೆ ವಿಚಾರಣೆಗೆ ಹೋಗದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್‌ನಿಂದ ದೆಹಲಿ ಮದ್ಯ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಶ್ನಿಸಲು ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಆರು ಬಾರಿ ಸಮನ್ಸ್​ ಜಾರಿ ಮಾಡಿದೆ. ಫೆಬ್ರವರಿ 19 ರಂದು ವಿಚಾರಣೆ ಹಾಜರಾಗುವಂತೆ ಇಡಿ ಈಗಾಗಲೇ ಸಮನ್ಸ್​ ನೀಡಿದೆ.

ಮತ್ತೊಂದು ಕಡೆ ಸಿಎಂ ಕೇಜ್ರಿವಾಲ್​ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂಬ ವಿಚಾರವಾಗಿ ಕೋರ್ಟ್​ಗೆ ಇಡಿ ಮೊರೆ ಹೋಗಿದೆ. ಈ ಬಗ್ಗೆ ವಿಚಾರಣೆ ಕೂಡಾ ದೆಹಲಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. ದೆಹಲಿ ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಆರೋಪಿಯಾಗಿದ್ದು, ಮದ್ಯ ನೀತಿಯ ಕರಡನ್ನು ಸಿಎಂ ಅವರ ನಿವಾಸದಲ್ಲೇ ರೆಡಿ ಮಾಡಲಾಗಿದೆ ಹಾಗೂ ಈ ವಿಚಾರದ ಬಗ್ಗೆ ಕೇಜ್ರಿವಾಲ್​ ಅವರಿಗೆ ಗೊತ್ತಿದೆ ಎಂದು ಇಡಿ ಹೇಳಿದೆ. ಅಷ್ಟೇ ಅಲ್ಲ ಈ ಹಗರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲು ಜಾರಿ ನಿರ್ದೇಶನಾಲಯ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಸಮನ್ಸ್​ಗಳನ್ನು ಜಾರಿ ಮಾಡುತ್ತಲೇ ಇದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಒಂದರ ಹಿಂದೆ ಒಂದರಂತೆ ಸಮನ್ಸ್ ಕಳುಹಿಸಿದ್ದರೂ ಇಡಿ ಎದುರು ವಿಚಾರಣೆಗೆ ಹಾಜರಾಗಿಲ್ಲ. ಇಡಿ ಕಳುಹಿಸಿದ ಸಮನ್ಸ್‌ಗೆ ಬದಲಾಗಿ ಅವರು ಲಿಖಿತ ಉತ್ತರಗಳನ್ನು ಇಡಿಗೆ ಕಳುಹಿಸಿದ್ದಾರೆ.

ಇಡಿ ಕಳುಹಿಸಿದ ಸಮನ್ಸ್‌ಗೆ ಅರವಿಂದ್ ಕೇಜ್ರಿವಾಲ್ ಉತ್ತರ ನೀಡಿದ್ದು, ನಮ್ಮ ಕಾನೂನು ತಂಡವು ಸಮನ್ಸ್ ಸ್ವೀಕರಿಸಲು ಸಿದ್ಧ ಎಂದು ಹೇಳಿದೆ. ಇಡಿ ಸಮನ್ಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಉತ್ತರದಲ್ಲಿ ಕೇಜ್ರಿವಾಲ್​ ವಿವರಿಸಿದ್ದಾರೆ . ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಮೊದಲಿನಿಂದಲೂ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೊಂದು ರಾಜಕೀಯ ಪಿತೂರಿ ಎಂದು ಅವರು ಆರೋಪಿಸಿದ್ದಾರೆ.

ಇದನ್ನು ಓದಿ:ದೆಹಲಿ ಕೋರ್ಟ್​ ಮುಂದೆ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆದ ಸಿಎಂ ಕೇಜ್ರಿವಾಲ್​

ABOUT THE AUTHOR

...view details