ಕರ್ನಾಟಕ

karnataka

'ನನ್ನ ತಂದೆಗೆ ಮತ ಹಾಕಬೇಡಿ'.. ಅಪ್ಪನ ವಿರುದ್ಧವೇ ತೊಡೆತಟ್ಟಿದ ಮಗ! - SON CONTEST AGAINST FATHER

By ETV Bharat Karnataka Team

Published : May 1, 2024, 3:50 PM IST

ಆಂಧ್ರಪ್ರದೇಶದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಎಲ್ಲಾ ಪಕ್ಷಗಳು ಪ್ರಚಾರವನ್ನು ತೀವ್ರಗೊಳಿಸಿವೆ. ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ. ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಇದರ ಮಧ್ಯೆ ಕೆಲವೆಡೆ ತಮ್ಮ ಮನೆಯಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ತಮ್ಮವರನ್ನೇ ಸೋಲಿಸಲು ಪ್ರಚಾರ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.

BUDI RAVIKUMAR POST VIRAL  YCP MP CANDIDATE  DEPUTY CM MUTHYALA NAIDU  ASSEMBLY ELECTION 2024
ನನ್ನ ತಂದೆಗೆ ಮತ ಹಾಕಬೇಡಿ ಎಂದು ಮಗ ಭರ್ಜರಿ ಪ್ರಚಾರ

ಅನಕಾಪಲ್ಲಿ (ಆಂಧ್ರಪ್ರದೇಶ): ರಾಜ್ಯ ಚುನಾವಣೆಯಲ್ಲಿ ಹಲವು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಕುಟುಂಬದಲ್ಲಿ ಒಂದಿಬ್ಬರು ಸ್ಪರ್ಧಿಸುತ್ತಿದ್ದಾರೆ ಎಂದು ಘೋಷಿಸಿದ್ದರು. ಬಳಿಕ ಅವರು ಸೈಲೆಂಟ್​ ಆಗಿ ಬಿಟ್ಟರು. ಇತ್ತೀಚಿಗೆ ಒಂದು ಕುತೂಹಲಕಾರಿ ಘಟನೆ ನಡೆದಿದೆ. ‘ನನ್ನ ತಂದೆಯನ್ನು ಸೋಲಿಸಿ’ ಎಂದು ಮಗನೊಬ್ಬ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಅನಕಾಪಲ್ಲಿ ಕ್ಷೇತ್ರದ ವೈಎಸ್‌ಆರ್‌ಸಿಪಿ ಸಂಸದ ಅಭ್ಯರ್ಥಿ ಬೂದಿ ಮುತ್ಯಾಲ ನಾಯ್ಡು ಅವರ ಪುತ್ರ ಬೂದಿ ರವಿಕುಮಾರ್ ಅವರು ‘ನನ್ನ ತಂದೆಯನ್ನು ಸೋಲಿಸಿ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಅನಕಾಪಲ್ಲಿ ಸಂಸದರಾಗಿ ಉಪ ಮುಖ್ಯಮಂತ್ರಿ ಮುತ್ಯಾಲ ನಾಯ್ಡು ಅವರ ಎರಡನೇ ಪತ್ನಿಯ ಪುತ್ರಿ ಅನುರಾಧ ಅವರು ಮಾಡುಗುಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇದರೊಂದಿಗೆ ಬೂದಿ ಮುತ್ಯಾಲನಾಯ್ಡು ಅವರ ಮೊದಲ ಪತ್ನಿಯ ಪುತ್ರ ಬೂದಿ ರವಿಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ರವಿಕುಮಾರ್ ತಮ್ಮ ತಂದೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸ್ವಂತ ಮಗನಿಗೆ ನ್ಯಾಯ ಕೊಡಿಸಲಾಗದವರು, ಮತ ಹಾಕಿದ ಜನರಿಗೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಎಲ್ಲರೂ ಯೋಚಿಸಿ ಮತ ನೀಡಿ.. ನನ್ನ ತಂದೆ ಬೂದಿ ಮುತ್ಯಾಲನಾಯ್ಡು ಅವರನ್ನು ಸೋಲಿಸಬೇಕು ಎಂದು ರವಿಕುಮಾರ್ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಇದರಿಂದ ವೈಸಿಪಿ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.

ಮಗನ ಬದಲು ಎರಡನೇ ಪತ್ನಿಯ ಮಗಳಿಗೆ ರಾಜಕೀಯ ಅವಕಾಶ ನೀಡಿದ್ದರಿಂದ ರವಿಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದರಿಂದ ಅನಕಾಪಲ್ಲಿ ಜಿಲ್ಲೆಯಲ್ಲಿ ಬೂದಿ ರವಿಕುಮಾರ್ ಬಿಡುಗಡೆ ಮಾಡಿರುವ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರವಿಕುಮಾರ್ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.

ತಾತ ಹಾಗೂ ಜನರ ಆಶೀರ್ವಾದದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸುತ್ತೇನೆ ಎಂದು ರವಿಕುಮಾರ್​ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರೆಲ್ಲರೂ ಯೋಚಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತನ್ನನ್ನು ಗೆಲ್ಲಿಸುವಂತೆ ರವಿಕುಮಾರ್​ ಮನವಿ ಮಾಡುತ್ತಿದ್ದಾರೆ. ಬೂದಿ ಮುತ್ಯಾಲ ನಾಯ್ಡು ಅವರನ್ನು ಸೋಲಿಸಲು ಅವರ ಪುತ್ರ ಪ್ರಚಾರ ನಡೆಸಿದ್ದರಿಂದ ಜಿಲ್ಲೆಯ ವೈಸಿಪಿ ಪಡೆಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಅಧಿಕಾರಿಗಳಿಂದ ಕ್ಯಾಂಪ್ ಕಚೇರಿ ತೆರವು:ಇತ್ತೀಚೆಗೆ ಕ್ಯಾಂಪ್ ಕಚೇರಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಮುತ್ಯಾಲನಾಯ್ಡು ಪುತ್ರ ಬೂದಿ ರವಿಕುಮಾರ್ ದೂರಿದ್ದರು. ಅಧಿಕಾರಿಗಳು ಸ್ಪಂದಿಸಿ ಶಿಬಿರ ಕಚೇರಿಯನ್ನು ತೆರವು ಮಾಡಿದರು. ಮತ್ತೊಂದೆಡೆ, ದೇವರಪಲ್ಲಿಯ ರೈವಾಡ ಅತಿಥಿ ಗೃಹಕ್ಕೆ ವೈಸಿಪಿ ಬಣ್ಣವಿದೆ ಎಂಬ ದೂರಿನ ಹಿನ್ನೆಲೆ ಬದಲಾವಣೆ ಮಾಡಲಾಗಿದೆ.

ಓದಿ:ಸಿದ್ದರಾಮಯ್ಯ ಸರ್ಕಾರ ಅಧಿಕಾರ ಬಿಟ್ಟು ಇಳಿದರೆ, 24 ಗಂಟೆಯಲ್ಲಿ ನಾವು ಪ್ರಜ್ವಲ್ ವಶಕ್ಕೆ ಪಡೆಯುತ್ತೇವೆ: ಆರ್​ ಅಶೋಕ್ ಚಾಲೆಂಜ್​ - HASSAN PEN DRIVE CASE

ABOUT THE AUTHOR

...view details