ಕರ್ನಾಟಕ

karnataka

ಮೇ.20ರ ಬಳಿಕವೇ CBSE ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟ: ಮಂಡಳಿಯಿಂದ ಸ್ಪಷ್ಟನೆ - CBSE RESULT DATE

By ETV Bharat Karnataka Team

Published : May 4, 2024, 10:00 AM IST

CBSE 10 ಮತ್ತು 12ನೇ ತರಗತಿ ಬೋರ್ಡ್​ ಪರೀಕ್ಷೆ ಫಲಿತಾಂಶ ದಿನಾಂಕದ ಬಗ್ಗೆ ಮಂಡಳಿ ತನ್ನ ವೆಬ್​ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಮೇ.20ರ ನಂತರ CBSE ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟ
ಮೇ.20ರ ನಂತರ CBSE ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟ (ETV Bharat) (Etv Bharat)

ನವದೆಹಲಿ:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಮೇ.20ರ ಬಳಿಕ ಪ್ರಕಟ ಮಾಡುತ್ತೇವೆ ಎಂದು ಮಂಡಳಿ ತಿಳಿಸಿದೆ.

CBSE ಬೋರ್ಡ್ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, 10 ಮತ್ತು 12 ನೇ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಮೇ 20ರ ನಂತರ ಘೋಷಿಸಲಾಗುತ್ತದೆ. ಇದೇ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮೇ 20 ರೊಳಗೆ ಸಿಬಿಎಸ್​ಇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳಬಾರದು ಎಂದು ವೆಬ್​ಸೈಟ್​ನಲ್ಲಿ ತಿಳಿಸಿದೆ.

CBSE 10 ಮತ್ತು 12ನೇ ತರಗತಿ ಬೋರ್ಡ್​ ಪರೀಕ್ಷೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಸಲಾಗಿತ್ತು. ಇದಾದ ಬಳಿಕ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಫಲಿತಾಂಶ ಪ್ರಕಟಿಸಲು ಸಿಬಿಎಸ್‌ಇ ಉತ್ತರ ಪತ್ರಿಕೆಗಳನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿತ್ತು. ಪರೀಕ್ಷೆಗಳು ಮುಗಿದು ಕೇವಲ 15 ದಿನಗಳ ನಂತರ, ಸಿಬಿಎಸ್‌ಇ ಬೋರ್ಡ್ 10 ಮತ್ತು 12 ನೇ ತರಗತಿ ಫಲಿತಾಂಶಗಳ ಪ್ರಕಟಣೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹರಿದಾಡಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಶುರುವಾಗಿತ್ತು. ಇದೀಗ ಸಿಬಿಎಸ್​ಇ ಮಂಡಳಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ. ಆದರೆ ಫಲಿತಾಂಶದ ದಿನಾಂಕವನ್ನು ಖಚಿತ ಪಡಿಸಿಲ್ಲ.

ಈ ವರ್ಷ CBSE ಬೋರ್ಡ್ 12ನೇ ಪರೀಕ್ಷೆ ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ಪರೀಕ್ಷೆಗಳನ್ನು ನಡೆಸಿತ್ತು. ಮತ್ತು 10 ನೇ ಪರೀಕ್ಷೆಗಳನ್ನು ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ನಡೆಸಲಾಗಿತ್ತು. ದೇಶದಾದ್ಯಂತ 39 ಲಕ್ಷ ವಿದ್ಯಾರ್ಥಿಗಳು CBSE ಬೋರ್ಡ್ 12 ಮತ್ತು 10ನೇ ತರಗತಿ ಪರೀಕ್ಷೆಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:ಎಸ್ಎಸ್ಎಲ್​ಸಿ ಮೌಲ್ಯಮಾಪನ ಮುಕ್ತಾಯ: ಮೇ 10ರೊಳಗೆ ಫಲಿತಾಂಶ ಪ್ರಕಟ ಸಾಧ್ಯತೆ - SSLC Results

ABOUT THE AUTHOR

...view details