ಕರ್ನಾಟಕ

karnataka

ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯಾಚರಣೆಯ ಯಶಸ್ಸಿಗೆ ಬಲ್ಗೇರಿಯನ್ ಅಧ್ಯಕ್ಷರ ಕೃತಜ್ಞತೆ: ಪ್ರಧಾನಿ ಮೋದಿ ಹೇಳಿದ್ದು ಹೀಗೆ

By ANI

Published : Mar 19, 2024, 12:10 PM IST

ಸೊಮಾಲಿಯಾ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ವಾಣಿಜ್ಯ ಹಡಗನ್ನು (ಎಂವಿ ರುಯೆನ್) ರಕ್ಷಿಸಿದ್ದಕ್ಕಾಗಿ ಬಲ್ಗೇರಿಯಾ ಅಧ್ಯಕ್ಷರು ಭಾರತೀಯ ನೌಕಾಪಡೆಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

Indian Navy  Bulgarian President  Indian Ocean region  Prime Minister Narendra Modi
ಭಾರತೀಯ ನೌಕಾಪಡೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ಸಿಗೆ ಬಲ್ಗೇರಿಯನ್ ಅಧ್ಯಕ್ಷ ಕೃತಜ್ಞತೆ: ಪ್ರಧಾನಿ ಮೋದಿ ಹೇಳಿದ್ದು ಹೀಗೆ...

ನವದೆಹಲಿ:ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರದರ್ಶಿಸಿದರು. ಭಾರತೀಯ ನೌಕಾಪಡೆಯು ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಏಳು ಬಲ್ಗೇರಿಯನ್ ಪ್ರಜೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುತ್ತಿರುವುದಕ್ಕೆ ಬಲ್ಗೇರಿಯನ್ ಅಧ್ಯಕ್ಷ ರುಮೆನ್ ರಾಡೆವ್ ಕೃತಜ್ಞತೆ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯಿಸಿ, ''ಬಲ್ಗೇರಿಯನ್ ಅಧ್ಯಕ್ಷ ರುಮೆನ್ ರಾಡೆವ್ ಅವರೇ ನಿಮ್ಮ ಸಂದೇಶವನ್ನು ನಾವು ಮೆಚ್ಚಿಕೊಳ್ಳುತ್ತೇನೆ. 7 ಬಲ್ಗೇರಿಯನ್ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಮನೆಗೆ ಮರಳುತ್ತಿರುವುದರಿಂದ ನಮಗೆ ಸಂತೋಷವಾಗಿದೆ. ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು, ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ.

ಮಾಲ್ಟಾ ಧ್ವಜದ ನೌಕೆಯನ್ನು (ಎಂವಿ ರುಯೆನ್) ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಡಲ್ಗಳ್ಳರು ಅಪಹರಿಸಿದ್ದರು. ಭಾರತೀಯ ನೌಕಾಪಡೆಯು ಇತರ ದೇಶಗಳ ಹಡಗುಗಳನ್ನು ದರೋಡೆ ಮಾಡುವ ಅಪಾಯವನ್ನು ಗುರುತಿಸಿತ್ತು. ಈ ಹಡಗುಗಳನ್ನು ಅಪಹರಣದಿಂದ ಮುಕ್ತಗೊಳಿಸಲು ಐಎನ್‌ಎಸ್ ಕೋಲ್ಕತ್ತಾ, ಐಎನ್‌ಎಸ್ ಸುಭದ್ರ ಮತ್ತು ಸೀ ಗಾರ್ಡಿಯನ್ ಡ್ರೋನ್‌ಗಳನ್ನು ನಿಯೋಜಿಸಲಾಗಿತ್ತು. ಕಾರ್ಯಾಚರಣೆಯ ಭಾಗವಾಗಿ, ವಾಯುಪಡೆಯು ತನ್ನ 'C-17' ಸಾರಿಗೆ ವಿಮಾನದ ಮೂಲಕ ನಮ್ಮ ಕರಾವಳಿಯಿಂದ ಸುಮಾರು 2,600 ಕಿ.ಮೀ ದೂರದಲ್ಲಿ ಎರಡು ಸಣ್ಣ ಯುದ್ಧ ದೋಣಿಗಳ (CRRC) ಮೇಲೆ ದಾಳಿ ಮಾಡಿತು. ಭಾರತೀಯ ನೌಕಾಪಡೆಯ ಮಾರ್ಕೋಸ್​ನ ಕಮಾಂಡೋಗಳೂ ಕಾರ್ಯಾಚರಣೆಗೆ ಇಳಿದರು. ಒಟ್ಟು 17 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿತ್ತು. ಮತ್ತು 35 ಕಡಲ್ಗಳ್ಳರನ್ನು ಬಂಧಿಸಲಾಗಿತ್ತು. ಹಡಗಿನ ಸಿಬ್ಬಂದಿಯಲ್ಲಿ ಏಳು ಬಲ್ಗೇರಿಯನ್ ಪ್ರಜೆಗಳು ಸೇರಿದ್ದಾರೆ.

"ಭಾರತೀಯ ನೌಕಾಪಡೆಯ ಧೈರ್ಯಶಾಲಿ ರಕ್ಷಣಾ ಕಾರ್ಯಾಚರಣೆಗಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು" ಎಂದು ಬಲ್ಗೇರಿಯನ್ ಅಧ್ಯಕ್ಷ ರುಮೆನ್ ರಾಡೆವ್ ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಬರೆದಿದ್ದಾರೆ. ಜೊತೆಗೆ ಬಲ್ಗೇರಿಯನ್ ವಿದೇಶಾಂಗ ಸಚಿವೆ ಮರಿಯಾ ಗೇಬ್ರಿಯಲ್ ಅವರು, ಭಾರತದ ವಿದೇಶಾಂಗ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ''ಭಾರತೀಯ ನೌಕಾಪಡೆಯ ಸಹಾಯದಿಂದ ಡಿಸೆಂಬರ್ 14, 2023 ರಂದು ಅಪಹರಿಸಲಾದ ರೂಯೆನ್ ಹಡಗಿನ ಸಿಬ್ಬಂದಿ ಹಾಗೂ ಏಳು ಬಲ್ಗೇರಿಯನ್ ನಾಗರಿಕರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ನಾವಿಕರು ಸುರಕ್ಷಿತವಾಗಿದ್ದಾರೆ. ಅವರನ್ನು ಬಲ್ಗೇರಿಯಾಕ್ಕೆ ಸಮಯೋಚಿತವಾಗಿ ಮರಳಿ ಕರೆತರಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ'' ಎಂದು ಫೇಸ್‌ಬುಕ್‌ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಗಡ್ಚಿರೋಲಿ ಎನ್​ಕೌಂಟರ್​: ನಾಲ್ವರು ನಕ್ಸಲರ ಹತ್ಯೆ

ABOUT THE AUTHOR

...view details