ಕರ್ನಾಟಕ

karnataka

ನಮ್ಮೂರಿಗೆ ಬಸ್ ಇಲ್ಲ ಸರ್.. ಸಚಿವರ ಕ್ಷೇತ್ರದ ಸಮಸ್ಯೆಯನ್ನು ಸಭೆಗೆ ಬಂದು ಮನವರಿಕೆ ಮಾಡಿದ ಮಕ್ಕಳು

By

Published : Jul 20, 2022, 3:52 PM IST

ಹುಬ್ಬಳ್ಳಿ : ಹುಬ್ಬಳ್ಳಿಯ ತಾಲೂಕು ಪಂಚಾಯಿತಿಯಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗೆ ಆಗಮಿಸಿದ ವಿದ್ಯಾರ್ಥಿಗಳು, ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿದರು. ನಾಗರಹಳ್ಳಿಯಿಂದ ಶಿರಗುಪ್ಪಿಗೆ ಶಾಲಾ ಸಮಯದಲ್ಲಿ ಬಸ್ ಸೇವೆ ಒದಗಿಸುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ನಾಗರಹಳ್ಳಿ ಗ್ರಾಮದಿಂದ ಸುಮಾರು 60ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದಿನನಿತ್ಯ 8 ಕಿಲೋಮೀಟರ್ ಪ್ರಯಾಣ ಮಾಡಬೇಕಾಗಿದ್ದು, ಈ ಬಗ್ಗೆ ನಾಗರಹಳ್ಳಿಯಿಂದ ಶಿರುಗುಪ್ಪಿಗೆ ಬಸ್ ಸೇವೆ ಒದಗಿಸುವಂತೆ ಸಚಿವರಲ್ಲಿ ಒತ್ತಾಯಿಸಿದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಚಿವರು, ಬಸ್ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

TAGGED:

ABOUT THE AUTHOR

...view details