ಕರ್ನಾಟಕ

karnataka

ಕೇರಳ: ನದಿಯಲ್ಲಿ ಸ್ನೇಕ್​​ ಬೋಟ್‌ ಮಗುಚಿ ಇಬ್ಬರು ಸಾವು- ವಿಡಿಯೋ

By

Published : Sep 11, 2022, 12:45 PM IST

ಆಲಪ್ಪುಳ (ಕೇರಳ): ಇಲ್ಲಿನ ಅಚನ್‌ಕೋವಿಲ್ ನದಿಯಲ್ಲಿ'ಸ್ನೇಕ್​​ ಬೋಟ್‌' (ಹಾವಿನ ದೋಣಿ) ಮಗುಚಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಘಟನೆ ಸಂಭವಿಸಿದೆ. ಆದಿತ್ಯನ್ (17) ಮತ್ತು ವಿನೀಶ್ (39) ಮೃತರು. ಮೃತದೇಹಗಳನ್ನು ಹೊರತೆಗೆಯಲಾಗಿದೆ. ನಾಪತ್ತೆಯಾದ ವ್ಯಕ್ತಿಗೆ ಶೋಧ ಮುಂದುವರೆದಿದೆ. ಪಲ್ಲಿಯೋಡಂ ಪಂಪಾದಲ್ಲಿ ನಡೆಯಲಿರುವ 'ಅರನ್ಮುಲ ಉತೃತ್ತತಿ ವಲ್ಲಂಕಾಳಿ' (ಸ್ನೇಕ್​​ ಬೋಟ್‌ ಸ್ಪರ್ಧೆ)ಯಲ್ಲಿ ಭಾಗವಹಿಸಲು ಇವರು ತೆರಳುತ್ತಿದ್ದರು. ದೋಣಿಯಲ್ಲಿ ಸುಮಾರು 60 ಜನರಿದ್ದರು ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ABOUT THE AUTHOR

...view details