ಕರ್ನಾಟಕ

karnataka

'ಮುಂದಿನ ಸಿಎಂ ಸಿದ್ದರಾಮಯ್ಯ': ಮುದ್ದೇಬಿಹಾಳದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಘೋಷಣೆ

By

Published : Jul 15, 2022, 9:23 AM IST

ಮುದ್ದೇಬಿಹಾಳ(ವಿಜಯಪುರ): ತಾಳಿಕೋಟಿ, ಮುದ್ದೇಬಿಹಾಳ ಮಾರ್ಗವಾಗಿ ಆಲಮಟ್ಟಿಗೆ ತೆರಳುತ್ತಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ತಾಲೂಕಿನ ಜಟ್ಟಗಿ ಗ್ರಾಮದಲ್ಲಿರುವ ಪಿಎಲ್​​ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ನಿವಾಸಕ್ಕೆ ಗುರುವಾರ ಸಂಜೆ ಭೇಟಿ ನೀಡಿದರು. ಈ ವೇಳೆ ಕಾಂಗ್ರೆಸ್​ ಮುಖಂಡರು ಹಾಗೂ ಸಮಾಜ ಸೇವಕ ಎಂ.ಎನ್.ಮದರಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಬಿ.ಕೆ.ಬಿರಾದಾರ ಅವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, 'ನಿನ್ನ ಮನೆಗೆ ಬರುತ್ತೇನೆ ಎಂದಿದ್ದೆ ಇದೀಗ ಬಂದಿದ್ದೇನೆ ನೋಡಪ್ಪ' ಎಂದರು. ರಸ್ತೆ ಮಾರ್ಗವಾಗಿ ಜಟ್ಟಗಿಗೆ ಆಗಮಿಸಿದ ಸಿದ್ಧರಾಮಯ್ಯನವರನ್ನು ಅಭಿಮಾನಿಗಳು ಉತ್ಸಾಹದಿಂದ ಸ್ವಾಗತಿಸಿದರು. ಇದೇ ವೇಳೆ ಕೆಲವರು 'ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ'ನವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ABOUT THE AUTHOR

...view details