ಕರ್ನಾಟಕ

karnataka

10 ವರ್ಷದ ಬಳಿಕ ಭರ್ತಿಯಾದ ಕೆರೆ: ಕೋಡಿ ಹರಿದು ಶಾಲೆಯ ಕಾಂಪೌಂಡ್ ಕುಸಿತ!

By

Published : Oct 13, 2020, 4:43 PM IST

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಸಂಡೂರಿನ ಶಿವಪುರ ಕೆರೆ ಕೋಡಿಬಿದ್ದ ಪರಿಣಾಮ ಎಸ್.ಆರ್.ಎಸ್ ಶಾಲೆಯ ಕಾಂಪೌಂಡ್​ ಕುಸಿದಿದೆ. ಕೆರೆಯ ಬಳಿ ಶಾಲೆಯ ಕಾಂಪೌಂಡ್​ ಇದ್ದು ನೀರಿನ‌ ರಭಸಕ್ಕೆ ಗೋಡೆ ಕುಸಿದಿದೆ. ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು ಭರ್ತಿಯಾದ ಕೆರೆಯ ನೀರು ಹರಿದ ಪರಿಣಾಮ ಹೊಸಪೇಟೆ ರಸ್ತೆ ಸಂಪೂರ್ಣ ನೀರಿನಿಂದ ತುಂಬಿಕೊಂಡಿದೆ. ಇದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಶ್ವರ ದೇವಸ್ಥಾನದ ಮುಂದೆ ಹಾಗೂ ನಗರದ ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಜಲಾವೃತಗೊಂಡಿವೆ. ವಿಶೇಷ ಎಂಬಂತೆ ಶಿವಪುರ ಕೆರೆಯು ಸುಮಾರು 10 ವರ್ಷದ ಬಳಿಕ ಭರ್ತಿಯಾಗಿದ್ದಕ್ಕೆ ಹಾಗೂ ಸಂಡೂರು ಭಾಗದಲ್ಲಿ ಸತತವಾಗಿ ಉತ್ತಮ ಮಳೆಯಾಗುತ್ತಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಡಿಸಿದ್ದಾರೆ.

ABOUT THE AUTHOR

...view details