ಕರ್ನಾಟಕ

karnataka

ಸಿಎಂ ಬಿಎಸ್​ವೈ ಕೊಟ್ಟ ಭರವಸೆ ಈಡೇರಿಸಿದ್ದಾರೆ:ಎಂಟಿಬಿ ನಾಗರಾಜ್

By

Published : Jan 13, 2021, 11:10 AM IST

ಬೆಂಗಳೂರು: ಮಾಧ್ಯಮಗಳಲ್ಲಿ ಎಂಟಿಬಿ ನಾಗರಾಜ್​ಗೆ ಸಚಿವ ಸ್ಥಾನ ಖಚಿತ ಎಂದು ಪ್ರಸಾರವಾಗುತ್ತಿರುವುದನ್ನು ನೋಡಿದ ಎಂಟಿಬಿ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಎಂಟಿಬಿ ನಾಗರಾಜ್, ಸಿಎಂ ಕಚೇರಿಯಿಂದ ನನಗೆ ಕರೆ ಬಂದಿದ್ದು, ಇಂದು ಸಂಜೆಯ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದ್ದಾರೆ. ನನಗೆ ಸಚಿವ ಸ್ಥಾನ ಸಿಗುವ ವಿಚಾರ ಬಹಳ ದಿನಗಳಿಂದ ಚರ್ಚೆಯಲ್ಲಿದ್ದು, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಇದೀಗ ಕಾಲ ಕೂಡಿ ಬಂದಿದೆ. ಇದೇ ಖಾತೆ ಬೇಕು ಎಂದು ಬೇಡಿಕೆ ಇಡುವುದಿಲ್ಲ. ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆಂದು ತಿಳಿಸಿದರು. ಜೊತೆಗೆ ಸಿಎಂ ಬಿಎಸ್​ವೈ ಕೊಟ್ಟ ಭರವಸೆ ಈಡೇರಿಸಿದ್ದು, ಅವರಿಗೆ ಧನ್ಯವಾದ ತಿಳಿಸಿದರು.

ABOUT THE AUTHOR

...view details