ಕರ್ನಾಟಕ

karnataka

ಕಲಬುರಗಿ: ನಿರಂತರ ಮಳೆಯಿಂದ ಕೆರೆಯ ಒಡ್ಡು ಒಡೆದು ಅಪಾರ ಹಾನಿ

By

Published : Oct 14, 2020, 10:06 PM IST

Updated : Oct 15, 2020, 12:17 AM IST

ಕಲಬುರಗಿ : ಇಂದು ಸುರಿದ ಮಳೆಯಿಂದ ಇಲ್ಲಿನ ಹಾಗರಗುಂಡಗಿ ಕೆರೆಯ ಒಡ್ಡು ಒಡೆದು ಅಪಾರ ಹಾನಿ ಆಗಿದೆ. ಅಕ್ಕ-ಪಕ್ಕದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ನಿರಂತರ ಮಳೆಯಿಂದ ಕಲಬುರಗಿ ತಾಲೂಕಿನ ಹಾಗರಗುಂಡಗಿ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೊರ ನುಗ್ಗಿದ ಕೆರೆ ನೀರಿನಿಂದ ಕೆರೆ ಭಾಗದ ಹೊಲ-ಗದ್ದೆಗಳು ಜಲಾವೃತಗೊಂಡಿವೆ. ಮಳೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೊಂದೆಡೆ ಅಫಜಲಪೂರ ತಾಲೂಕಿನ ಬೀದನೂರ ಗ್ರಾಮದಲ್ಲಿಯೂ ಸಹ ಕೆರೆ ಒಡ್ಡು ಒಡೆದು ಆತಂಕ ಸೃಷ್ಟಿಸಿದೆ. ಕೆರೆ ಕೆಳಭಾಗದ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಕವಲಗಾ ಗ್ರಾಮ ಸೇರಿದಂತೆ ಹಲವು ಗ್ರಾಮಗಳಿಗೆ ಕೆರೆಯ ನೀರು ನುಗ್ಗಿದ್ದು ಹಲವರು ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ.
Last Updated : Oct 15, 2020, 12:17 AM IST

ABOUT THE AUTHOR

...view details