ಕರ್ನಾಟಕ

karnataka

ಸಾರಿಗೆ ನೌಕರರ ಮುಷ್ಕರ: ಮೆಜೆಸ್ಟಿಕ್​ನಲ್ಲಿ ಬಸ್ಸಿಲ್ಲದೆ ಪ್ರಯಾಣಿಕರ ಪರದಾಟ

By

Published : Dec 11, 2020, 2:34 PM IST

ಸಾರಿಗೆ ನೌಕರರ ಮುಷ್ಕರದಿಂದಾಗಿ ಇದೀಗ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ನಾ ಕೊಡೆ ನೀ ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಹಾಗೂ ಸಾರಿಗೆ ನೌಕರರ ಜಟಾಪಟಿಯಲ್ಲಿ ಇತ್ತ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ನಿಲ್ದಾಣ ಬಸ್​​ಗಳಿಲ್ಲದೆ ಬಿಕೋ ಅಂತಿದೆ. ಬೇರೆ-ಬೇರೆ ಜಿಲ್ಲೆಗಳಿಂದ ಬಂದ ಪ್ರಯಾಣಿಕರು ಬಸ್ಸುಗಳಲ್ಲಿದೇ ಮನೆಗೆ ತಲುಪಲು ಆಗದೇ ಪರದಾಡುತ್ತಿದ್ದಾರೆ. ಆಟೋಗೆ ಹೋಗೋಣ ಅಂದ್ರೆ ಅವರು ದುಪ್ಪಟ್ಟು ಹಣ ಕೇಳ್ತಿದ್ದಾರೆ. ಹೀಗಾಗಿ ಸಂಜೆ ಮೇಲೆ ಬಸ್ಸು ಬಂದರೆ ಹೋಗೋಣಾ ಅಂತಿದ್ದೀವಿ ಅಂತ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ABOUT THE AUTHOR

...view details