ಕರ್ನಾಟಕ

karnataka

ಮೈಸೂರು: ನುಗು ಹಿನ್ನೀರಿನಲ್ಲಿ ಮೀನಿನ ಬಲೆಗೆ ಸಿಲುಕಿದ ಕಾಡಾನೆ - ವಿಡಿಯೋ

By

Published : Jan 19, 2021, 2:40 PM IST

Updated : Jan 19, 2021, 2:58 PM IST

ಮೈಸೂರು: ಕಾಡಾನೆಯೊಂದು ನೀರು ಕುಡಿಯಲು ಬಂದು ಮೀನಿನ ಬಲೆಗೆ ಸಿಲುಕಿರುವ ಘಟನೆ ನುಗು ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ. ಜಿಲ್ಲೆಯ ಸರಗೂರು ತಾಲೂಕಿನ ನುಗು ಜಲಾಶಯದ ಹಿನ್ನೀರಿನಲ್ಲಿ ಹಾಕಿದ್ದ ಮೀನಿನ ಬಲೆಗೆ ಆನೆ ಸಿಲುಕಿದ್ದು, ಹೊರ ಬರಲಾರದೆ ಒದ್ದಾಡಿದೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಬೋಟ್ ಮೂಲಕ ತೆರಳಿ ಆನೆಯನ್ನ ರಕ್ಷಿಸಲು ಯತ್ನಿಸುತ್ತಿದ್ದಾರೆ. ಆನೆಗಳು ರಾತ್ರಿ ನೀರು ಕುಡಿದು ನಂತರ ಹಿನ್ನೀರಿನ ಮೂಲಕ ಹಾದು ಮತ್ತೊಂದು ಬದಿಗೆ ಹೋಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ಕಾಡಾನೆ ಮೀನಿನ ಬಲೆಗೆ ಸಿಲುಕಿದೆ ಎನ್ನಲಾಗ್ತಿದೆ.
Last Updated : Jan 19, 2021, 2:58 PM IST

ABOUT THE AUTHOR

...view details