ಕರ್ನಾಟಕ

karnataka

ಹುಣುಸೂರಿನಲ್ಲಿ ನಾವು ಗೆದ್ದಾಗಿದೆ: ಡಾ.ಜಿ. ಪರಮೇಶ್ವರ್​​ ವಿಶ್ವಾಸ

By

Published : Nov 25, 2019, 12:55 PM IST

ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನ ನೋಡಿದರೆ ಹುಣಸೂರು ಕ್ಷೇತ್ರದಲ್ಲಿ ನಾವು ಈಗಾಗಲೇ ಗೆಲುವು ಸಾಧಿಸಿದ್ದೇವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಂತರ ಮಾಶ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಿನ ರಾಜಕೀಯ ವಿದ್ಯಮಾನಗಳು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಹರಿಯಾಣ, ಮಧ್ಯಪ್ರದೇಶದಲ್ಲೂ ಪಕ್ಷಾಂತರ ಮಾಡಿದವರು ಸೋತಿದ್ದಾರೆ. ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಈಗಾಗಲೇ ಉಪಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದಂತಾಗಿದೆ, ನಮ್ಮ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಗೆಲುವು ಸಾಧಿಸಿದ್ದಾರೆ ಎಂದರು.

ABOUT THE AUTHOR

...view details