ತುಮಕೂರು: ಚಿನ್ನ ಖರೀದಿ ನೆಪದಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ- ಸಿಸಿಟಿವಿ ದೃಶ್ಯ
Published : Dec 5, 2023, 6:16 PM IST
ತುಮಕೂರು:ಚಿನ್ನಾಭರಣ ಖರೀದಿಸುವ ನೆಪದಲ್ಲಿ ತಾಯಿ ಹಾಗೂ ಮಗಳ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದು 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ತುಮಕೂರಿನ ಗುಂಚಿ ಸರ್ಕಲ್ ಬಳಿಯಿರುವ ಎಸ್ಎನ್ಡಿ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದೆ. ಇಬ್ಬರ ಕೃತ್ಯದ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿಸೆಂಬರ್ 2ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಾಯಿ ಮತ್ತು ಮಗಳ ಸೋಗಿನಲ್ಲಿ ಆಗಮಿಸಿದ್ದ ಇಬ್ಬರು ಮಾಂಗಲ್ಯ ಸರ ಖರೀದಿ ಮಾಡುವುದಾಗಿ ಹೇಳಿ ಸರಗಳನ್ನು ವೀಕ್ಷಿಸಿದ್ದಾರೆ. ಮಾತುಕತೆ ಮಾಡುತ್ತಾ ಮಾಲೀಕನ ಗಮನ ಬೇರೆಡೆ ಸೆಳೆದ ಇಬ್ಬರು ವ್ಯವಸ್ಥಿತವಾಗಿ ಸರ ಬಚ್ಚಿಟ್ಟುಕೊಂಡರು. ನಂತರ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಪರಾರಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ತುಮಕೂರು ನಗರ ಠಾಣೆಗೆ ಜ್ಯುವೆಲ್ಲರಿ ಶಾಪ್ ಮಾಲೀಕ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ತುಮಕೂರು ನಗರ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ನೋಡಿ:ಚಿಕ್ಕಬಳ್ಳಾಪುರ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದ ಕಳ್ಳ- ಸಿಸಿಟಿವಿ ದೃಶ್ಯ