ಕರ್ನಾಟಕ

karnataka

ತಮಿಳುನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ: ಚೆನ್ನೈನ ಹಲವು ಭಾಗ ಜಲಾವೃತ

By ETV Bharat Karnataka Team

Published : Nov 30, 2023, 2:34 PM IST

ಚೆನ್ನೈನ ಹಲವು ಭಾಗ ಜಲಾವೃತ

ಚೆನ್ನೈ:ಸತತ ಮಳೆಯಿಂದಾಗಿ ಪಕ್ಕದ ರಾಜ್ಯ ತಮಿಳುನಾಡು ತತ್ತರಿಸಿದೆ. ಈಶಾನ್ಯ ಮುಂಗಾರು ಚುರುಕುಗೊಂಡಿದ್ದು, ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೆನ್ನೈನ ಹಲವು ಭಾಗಗಳು ಜಲಾವೃತವಾಗಿದೆ. ತಿರುವಳ್ಳೂರು ಚೆಂಗಲ್ಪಟ್ಟು, ಕಾಂಚೀಪುರಂ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಚೆನ್ನೈ ಹಾಗೂ ಉಪನಗರಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು.

ಉಪನಗರ ಪ್ರದೇಶಗಳಾದ ಪುಝಲ್, ಸೆಂಗುನ್ರಾಮ್, ಮಾಧವರಂ, ಚೋಳವರಂ, ಪೊನ್ನೇರಿ, ಕುಮ್ಮಿಡಿಪೂಂಡಿ, ಚೋಶಿಂಗನಲ್ಲೂರು ಮುಂತಾದೆಡೆ ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ಕೆಲ ಕಡೆ ಜನವಸತಿ ಪ್ರದೇಶಗಳಿಗೂ ನೀರು ನುಗ್ಗಿದ್ದು,  ಚೆನ್ನೈ ಸಿಂಧತಿರಿಪ್ಪೆಟ್ ಮೀನು ಮಾರುಕಟ್ಟೆ ಹಾಗೂ ಹಿಂದೂ ಫ್ರಂಟ್ ಕಚೇರಿ ಎದುರು ಮೊಣಕಾಲುವರೆಗೆ ನೀರು ನಿಂತಿತ್ತು.  

ರೈಲು ಸಂಚಾರಕ್ಕೆ ಅಡತಡೆ:ಅಂಬತ್ತೂರು ಮತ್ತು ಆವಡಿ ರೈಲು ನಿಲ್ದಾಣಗಳ ನಡುವೆ ಮಳೆ ನೀರು ನಿಂತಿರುವುದು ಕಂಡು ಬಂತು. ಇದರಿಂದಾಗಿ, ಚೆನ್ನೈ ಸೆಂಟ್ರಲ್​ನಿಂದ ಮುಂಬೈಗೆ ತೆರಳುವ ಎಕ್ಸ್ ಪ್ರೆಸ್ ರೈಲುಗಳು, ಮಂಗಳೂರು ಸೆಂಟ್ರಲ್ ಮೇಲ್, ಅಲಪ್ಪುಳ ಎಕ್ಸ್ ಪ್ರೆಸ್, ನೀಲಗಿರಿ ಎಕ್ಸ್ ಪ್ರೆಸ್, ಕಾವೇರಿ ಎಕ್ಸ್ ಪ್ರೆಸ್, ಪಾಲಕ್ಕಾಡ್ ಎಕ್ಸ್ ಪ್ರೆಸ್ ರೈಲುಗಳು ಸೆಂಟ್ರಲ್ ರೈಲು ನಿಲ್ದಾಣದಿಂದ ವಿಳಂಬಗೊಂಡವು. ಅಲ್ಲದೆ, ಸೆಂಟ್ರಲ್ - ಅರಕ್ಕೋಣಂ ನಡುವಿನ ಉಪನಗರ ರೈಲುಗಳು 20 ರಿಂದ 30 ನಿಮಿಷಗಳ ಕಾಲ ತಡವಾಗಿ ಹೊರಟವು.  

ಇದನ್ನೂ ಓದಿ:ಕಪ್ಪು ಸಮುದ್ರದಲ್ಲಿ ಚಂಡಮಾರುತ; ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ ಐದು ಲಕ್ಷಕ್ಕೂ ಅಧಿಕ ಜನ

ABOUT THE AUTHOR

...view details