ಕರ್ನಾಟಕ

karnataka

ಸಂಸತ್​ನಲ್ಲಿ ಭದ್ರತಾ ಲೋಪ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ.. ಸುಂದರೇಶ್ ಆಗ್ರಹ

By ETV Bharat Karnataka Team

Published : Dec 16, 2023, 3:25 PM IST

ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್

ಶಿವಮೊಗ್ಗ: ಸಂಸತ್​ ಭವನದಲ್ಲಿ ಭದ್ರತಾ ಲೋಪ ಉಂಟಾಗಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಒತ್ತಾಯಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ಭವನದ ದಾಳಿಯನ್ನು ಪಕ್ಷಾತೀತವಾಗಿ ಖಂಡಿಸಬೇಕು. ಸಂಸತ್ತಿನ ಒಳಗೆ ನುಗ್ಗಿದವರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ  ಪಾಸ್ ನೀಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಪಾಸ್ ನೀಡಿದ ಸಂಸದರನ್ನು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಪಾಸ್ ಒಂದು ವೇಳೆ ಕಾಂಗ್ರೆಸ್​ನ ಸಂಸದರು ನೀಡಿದ್ದರೆ, ಬಿಜೆಪಿಯವರು ಇಡೀ ದಿನ ಬೊಬ್ಬೆ ಹಾಕುತ್ತಿದ್ದರು. ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದರು. ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್​ ಭದ್ರತಾ ಲೋಪದ ಹೊಣೆ ಹೊರಬೇಕು. ಈ ಬಗ್ಗೆ ದೇಶ ಜನತೆಗೆ ಮಾಹಿತಿ ನೀಡಬೇಕು. ಜೊತೆಗೆ ನಾಲ್ಕು ಗೋಡೆಗಳ ಮಧ್ಯೆ ವಿಚಾರಣೆ ನಡೆಸದೇ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಈ ವೇಳೆ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.

ABOUT THE AUTHOR

...view details