ಕರ್ನಾಟಕ

karnataka

ಗಡಿ ಜಿಲ್ಲೆಯಲ್ಲಿ ಸಂಕ್ರಾಂತಿ ಆಚರಣೆ: ಗಾಳಿಪಟ ಹಾರಿಸಿ ಸಂಭ್ರಮಿಸಿದ ಹುಮನಾಬಾದ್​ ಜನ

By

Published : Jan 15, 2023, 7:29 PM IST

Updated : Feb 3, 2023, 8:39 PM IST

ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಗಡಿಜಿಲ್ಲೆ ಬೀದರ್​ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ವಿಶೇಷವಾಗಿ ಹುಮನಾಬಾದ್​ ಪಟ್ಟಣದಲ್ಲಿ ದಿನವಿಡೀ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದರು. ಸಹೋದರರಾದ ಶಾಸಕ ರಾಜಶೇಖರ ಬಿ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ್, ಭೀಮರಾವ್ ಬಿ. ಪಾಟೀಲ್ ಅವರು ಸಹ ಗಾಳಿಪಟ ಹಾರಿಸಿ ಯುವಕರಿಗೆ ಉತ್ಸಾಹ ತುಂಬಿದರು. ಸ್ಥಳೀಯ ಸಂಘಸಂಸ್ಥೆಗಳ ಸದಸ್ಯರು ಗ್ರಾಮದ ಜನರಿಗೆ ಎಳ್ಳು ಬೆಲ್ಲ ಹಂಚಿದರು. ಈ ಊರಿನಲ್ಲಿ ಹಲವು ವರ್ಷಗಳಿಂದ ಗಾಳಿಪಟ ಹಾರಿಸುವ ಸಂಪ್ರದಾಯ ಹಬ್ಬದಂತೆಯೇ ನಡೆದುಕೊಂಡು ಬರುತ್ತಿದೆ.

Last Updated : Feb 3, 2023, 8:39 PM IST

ABOUT THE AUTHOR

...view details