ಕರ್ನಾಟಕ

karnataka

ಪಿಂಚಣಿ ಪಡೆಯಲು ವೃದ್ಧೆಯನ್ನು ಕವಡಿಯಲ್ಲಿ ಕಚೇರಿಗೆ ಕರೆತಂದ ತಂದೆ, ಮಗ: ವಿಡಿಯೋ ವೈರಲ್​

By

Published : May 24, 2023, 10:35 PM IST

ಪಿಂಚಣಿ ಪಡೆಯಲು ವೃದ್ಧೆಯನ್ನು ಕವಡಿಯಲ್ಲಿ ಕಚೇರಿಗೆ ಕರೆತಂದ ತಂದೆ, ಮಗ:ವಿಡಿಯೋ ವೈರಲ್​

ಲತೇಹಾರ್(ಜಾರ್ಖಂಡ್): ಪಿಂಚಣಿ  ಪಡೆಯಲು ವೃದ್ಧೆಯನ್ನು ಆಕೆಯ ಪತಿ ಹಾಗೂ ಮಗ ಕವಡಿಯಲ್ಲಿ ಕುರಿಸಿಕೊಂಡು ಕಚೇರಿ ಕೆರೆತಂದಿರುವ ಮನಕಲಕುವ ಘಟನೆ ಲತೇಹಾರ್​ನಲ್ಲಿ ನಡೆದಿದೆ. ಇಲ್ಲಿನ ಬುಡಕಟ್ಟು ಕುಟುಂಬದ ವೃದ್ಧೆಯೊಬ್ಬರು ಪಿಂಚಣಿ ಪಡೆಯಲು ಆಕೆಯ ಪತಿ ಹಾಗೂ ಮಗ ಅವರನ್ನು ಕವಡಿಯಲ್ಲಿ ಕುರಿಸಿಕೊಂಡು ಜಿಲ್ಲೆಯ ಮಹುವದಂಡ್ ಬ್ಲಾಕ್ ಕೇಂದ್ರಕ್ಕೆ ಕರೆತಂದಿದ್ದಾರೆ.  ಗ್ರಾಮದಲ್ಲಿ ರಸ್ತೆ ನಿರ್ಮಾಣವಾಗದೇ ಇರುವುದೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಇಲ್ಲಿನ ಸರ್ಕಾರವು ಹಳ್ಳಿಯಿಂದ ಹಳ್ಳಿಗೆ ಮೆಟಲ್ ರಸ್ತೆಗಳನ್ನು ನಿರ್ಮಿಸುವುದಾಗಿ ಆಶ್ವಾಸೆ ನೀಡಿತ್ತು. ಆದರೆ ಲತೇಹರ್ ಜಿಲ್ಲೆಯ ಮಹುವದಂಡ್ ಬ್ಲಾಕ್‌ನ ಅನೇಕ ಹಳ್ಳಿಗಳಲ್ಲಿ ಮೆಟಲ್ ರಸ್ತೆಗಳ ನಿರ್ಮಾವಾಗಿಲ್ಲ. ಗ್ವಾಲ್ಖಂಡ್  ಎಂಬ ಹಳ್ಳಿಯಲ್ಲಿ ಇಂದಿಗೂ ರಸ್ತೆ ನಿರ್ಮಾಣವಾಗದ ಕಾರಣ ಗ್ರಾಮಸ್ಥರು ಕಾಲ್ನಡಿಗೆಯಲ್ಲೇ ಗ್ರಾಮಕ್ಕೆ ಬಂದು ಹೋಗಬೇಕಾದ ಅನಿವಾರ್ಯತೆ ನಿಮಾರ್ಣವಾಗಿದೆ. ಬ್ಲಾಕ್ ಹೆಡ್ ಕ್ವಾರ್ಟರ್ಸ್ ನಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮಕ್ಕೆ ಸೈಕಲ್ ಮೂಲಕವೂ ತಲುಪುವುದು ಕಷ್ಟವಾಗಿದೆ. ಈ ಕಾರಣದಿಂದ ವೃದ್ಧೆಯನ್ನು ಕವಡಿಯಲ್ಲಿ ಕುರಿಸಿಕೊಂಡು ಕಚೇರಿಗೆ ಕರೆತರಲಾಗಿದೆ. 

ABOUT THE AUTHOR

...view details