ಕರ್ನಾಟಕ

karnataka

FRUITS ಆ್ಯಪ್ ಮೂಲಕ ಬರ ಪರಿಹಾರ ವಿತರಣೆ: ಸಚಿವ ಕೃಷ್ಣ ಭೈರೇಗೌಡ

By ETV Bharat Karnataka Team

Published : Dec 26, 2023, 4:04 PM IST

ಸಚಿವ ಕೃಷ್ಣ ಭೈರೇಗೌಡ

ಕೊಪ್ಪಳ:ಬರ ಪರಿಹಾರವನ್ನು FRUITS ಆ್ಯಪ್ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಹೋಬಳಿ ವಿಸ್ತೀರ್ಣ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. 

FRUITS ಆ್ಯಪ್ ಎಂಬುದು ರೈತರ ನೋಂದಣಿ ಡಾಟಾ ಬೇಸ್​. ಇದರಲ್ಲಿ ರೈತರ ಹೆಸರು, ಬ್ಯಾಂಕ್​ ಅಕೌಂಟ್​, ಆಧಾರ್​ ಕಾರ್ಡ್​ ಸಂಖ್ಯೆ​ ಮತ್ತು ಜಮೀನಿನ ವಿವರ ಇರುತ್ತದೆ. ಹಾಗಾಗಿ ನೇರವಾಗಿ ಈ ಆ್ಯಪ್​ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಬರ ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ. 

ಈ ವಾರದಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕಿನಲ್ಲಿ ಪರಿಹಾರ ನೀಡಲಾಗುವುದು. ಇದರ ಸಾಧಕ-ಬಾಧಕಗಳನ್ನು ನೋಡಿ ಮುಂದೆ ಕ್ರಮ ಕೈಗೊಳ್ಳಲಾಗುವುದು. ಈ ಆ್ಯಪ್‌ನಲ್ಲಿ ತಪ್ಪುಗಳು ಕಂಡುಬಂದರೆ ಸರಿಪಡಿಸಲಾಗುವುದು. ಇದು ಶಾಶ್ವತ ಪರಿಹಾರ ನೀಡುವ ಆ್ಯಪ್ ಆಗಿರುತ್ತದೆ. ಆ್ಯಪ್‌ನಲ್ಲಿ ಈಗ ಶೇ.50ರಷ್ಟು ರೈತರು ಮಾಹಿತಿ ನೋಂದಾಯಿಸಿದ್ದಾರೆ. 

ಸದ್ಯ ಅಭಿಯಾನ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ. ರಾಜ್ಯದಲ್ಲಿ 236 ತಾಲೂಕುಗಳಲ್ಲಿ ಬರವಿದೆ. ಈ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇವೆ. ಕೇಂದ್ರ ಅಧ್ಯಯನ ತಂಡ ಬಂದು ರಾಜ್ಯದಲ್ಲಿನ ಬರ ಅಧ್ಯಯನ ಕೈಗೊಂಡು ಮಾಹಿತಿ ಪಡೆದುಕೊಂಡಿದ್ದರಿಂದ ತೀವ್ರತೆಯ ಮನವರಿಕೆಯಾಗಿದೆ. ಕೇಂದ್ರ ಸರಕಾರ ಇಷ್ಟರಲ್ಲಿಯೇ ಪರಿಹಾರ ನೀಡುವ ಭರವಸೆ ನಮಗಿದೆ ಎಂದು ಸಚಿವರು ಹೇಳಿದರು.   

ಇದನ್ನೂ ಓದಿ:ಶಿವಾನಂದ ಪಾಟೀಲ್ ಸಚಿವರಾಗಲು ಅಲ್ಲ, ಶಾಸಕರಾಗಲೂ ಯೋಗ್ಯರಲ್ಲ: ರೈತರ ಆಕ್ರೋಶ

ABOUT THE AUTHOR

...view details