ಕರ್ನಾಟಕ

karnataka

ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ: 22 ದಿನಕ್ಕೆ 1.82 ಕೋಟಿ ರೂಪಾಯಿ ಸಂಗ್ರಹ

By

Published : Mar 30, 2023, 11:31 AM IST

ಹನೂರು ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ

ಚಾಮರಾಜನಗರ: ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಬುಧವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಬರೋಬ್ಬರಿ 1.82 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಬಾರಿ ಅಮಾವಾಸ್ಯೆ, ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ಇದನ್ನೂ ಓದಿ :36 ದಿನಗಳಲ್ಲೇ ಮಲೆಮಹದೇಶ್ವರನಿಗೆ ಹರಿದುಬಂತು ಕೋಟ್ಯಂತರ ಕಾಣಿಕೆ

ಕಳೆದ 22 ದಿನಗಳ ಅವಧಿಯಲ್ಲಿ 1 ಕೋಟಿ 82 ಲಕ್ಷದ 30 ಸಾವಿರದ 192 ರೂಪಾಯಿ ನಗದು ಹಾಗೂ 85 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ‌. ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬೆಳಗ್ಗೆ ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಪೊಲೀಸ್ ಬಂದೋಬಸ್ತ್ ನಡುವೆ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. 

ಇದನ್ನೂ ಓದಿ :ಸೊರಬ: ಚಂದ್ರಗುತ್ತಿ ರೇಣುಕಾಂಬ ದೇವಾಲಯದ ಹುಂಡಿ ಎಣಿಕೆ, ₹25 ಲಕ್ಷ ಸಂಗ್ರಹ

ABOUT THE AUTHOR

...view details