ಕರ್ನಾಟಕ

karnataka

ಚಹಾ ಮಾಡಿಕೊಟ್ಟು ಮತ ಯಾಚಿಸಿದ ಜೆಡಿಎಸ್​ ಅಭ್ಯರ್ಥಿ: ಬಿಸಿಲೂರಲ್ಲಿ ಚುನಾವಣೆ ಪ್ರಚಾರ ಚುರುಕು

By

Published : Apr 21, 2023, 8:04 PM IST

ಟೀ ಮಾಡಿಕೊಟ್ಟು ಮತ ಯಾಚಿಸಿದ ಜೆಡಿಎಸ್​ ಅಭ್ಯರ್ಥಿ

ರಾಯಚೂರು: ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಟೀ ಮಾಡುವ ಮೂಲಕ ಇಂದು ತಮ್ಮ ಚುನಾವಣಾ ಪ್ರಚಾರ ನಡೆಸಿದರು. ಪಟ್ಟಣದ ಪುರಸಭೆ ಕಚೇರಿ ಹತ್ತಿರವಿರುವ ಫಾರೂಕ್ ಟೀ ಶಾಪ್‌ನಲ್ಲಿ ಖುದ್ದಾಗಿ ಚಹಾ ತಯಾರಿಸುವ ಮೂಲಕ‌ ಗಮನ ಸೆಳೆದರು. 

ಮಧ್ಯಾಹ್ನದ ವೇಳೆ ಪಟ್ಟಣದಲ್ಲಿ ಪ್ರಚಾರಕ್ಕೆ ತೆರಳುವಾಗ ಅವರ ಅಭಿಮಾನಿಯಾಗಿರುವ ಫಾರೂಕ್ ಟೀ ಕುಡಿಯಲು ಆಹ್ವಾನಿಸಿದರು. ಅಭಿಮಾನಿಗಳ ಆಹ್ವಾನದ ಮೇರೆಗೆ ಟೀ ಅಂಗಡಿ‌ ಹೋದ ಕರೆಮ್ಮ, ಅಲ್ಲಿನ ಕೆಲಸಗಾರರು ಚಹಾ ಮಾಡುತ್ತಿದ್ದದ್ದನ್ನು ನೋಡಿ, ನಾನೇ ನಿಮಗೆ ಟೀ ಮಾಡಿ ಕೊಡುವುದಾಗಿ ಹೇಳಿ, ಟೀ ತಯಾರಿಸಿ ಅಲ್ಲಿ ಇದ್ದವರಿಗೆ ನೀಡಿದರು. ಈ ಮೂಲಕ ತಮ್ಮ ಪ್ರಚಾರದ ವೇಳೆ ನಿಮ್ಮ‌ ಸೇವಕಿಯಾಗಿಯೂ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಹೇಳಿ ಮತಯಾಚನೆ ಮಾಡಿದರು.

ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ನಡುವೆ ನೇರ ಹಣಾಹಣಿ ಇದೆ. ಇಬ್ಬರು ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. 

ಇದನ್ನೂ ನೋಡಿ:ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ: ಆನಂದ ನ್ಯಾಮಗೌಡ

ABOUT THE AUTHOR

...view details