ಕರ್ನಾಟಕ

karnataka

ದರ್ಗಾಕ್ಕೆ ತೆರಳಿ ಆಶೀರ್ವಾದ ಪಡೆದ ಜಂಬೂಸವಾರಿ ಗಜಪಡೆಗಳು : ವಿಡಿಯೋ...

By ETV Bharat Karnataka Team

Published : Oct 24, 2023, 7:02 AM IST

ದರ್ಗಾಕ್ಕೆ ತೆರಳಿ ಆರ್ಶೀವಾದ ಪಡೆದ ಗಜಪಡೆಗಳು

ಮೈಸೂರು: ಇಂದು ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ ನಡೆಯಲಿದೆ. ಇದಕ್ಕೂ ಮುನ್ನ ಅಭಿಮನ್ಯು ನೇತೃತ್ವದ 14 ಗಜಪಡೆ ದರ್ಗಾದಲ್ಲಿ ಸಂಪ್ರದಾಯದಂತೆ ಆಶೀರ್ವಾದ ಪಡೆದವು. ನಗರದ ಚಾಮರಾಜ ಮೊಹಲ್ಲಾದ ಹಜರತ್ ಹಿಮಾಮ್ ಷಾ ವಲ್ಲಿ ದರ್ಗಾಕ್ಕೆ ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ದರ್ಗಾಕ್ಕೆ ಸಲಾಂ ಮಾಡಿ, ಆಶೀರ್ವಾದ ಪಡೆದವು. ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ರಾಜಮನೆತನದವರು ನಿರ್ಮಾಣ ಮಾಡಿಕೊಟ್ಟಿರುವ ಈ ದರ್ಗಾಕ್ಕೆ, ಜಂಬೂಸವಾರಿಗೆ ಹಿಂದಿನ ದಿನ ಗಜಪಡೆ ಆಗಮಿಸಿ, ಆಶೀರ್ವಾದ ಪಡೆಯುವುದು ವಾಡಿಕೆ. ಅದೇ ರೀತಿ ಇಂದು ಸಹ ದರ್ಗಾಕ್ಕೆ ಆಗಮಿಸಿದ ಗಜಪಡೆಗೆ ದುಪಾ ಮಾಡಿ, ಆನೆಗಳಿಗೆ ವಿಭೂತಿಯನ್ನ ಹಚ್ಚಲಾಯಿತು.  

ಈ ಸಂದರ್ಭದಲ್ಲಿ ಭಾರಿ ಜನ ಚಾಮುಂಡೇಶ್ವರಿ ತಾಯಿಗೆ ಜೈಕಾರ ಹಾಕಿದರು. ದರ್ಗಾದ ಆಶೀರ್ವಾದ ಪಡೆದ ಆನೆಗಳು ದರ್ಗಾಕ್ಕೆ ಸಲಾಂ ಮಾಡಿದವು. ಜಂಬೂಸವಾರಿಯ ಹಿಂದಿನ ದಿನ ಗಣಪತಿ, ಚಾಮುಂಡೇಶ್ವರಿ ತಾಯಿ, ದರ್ಗಾದ ಆಶಿರ್ವಾದವನ್ನ ಗಜಪಡೆ ಪಡೆಯುವುದು ಹಿಂದಿನಿಂದ ನಡೆದುಕೊಂಡು ಬಂದ ಇಲ್ಲಿನ ಪದ್ದತಿಯಾಗಿದೆ.

ಇದನ್ನೂ ಓದಿ:ನಾಳೆ ಶಿವಮೊಗ್ಗದಲ್ಲಿ ವಿಜಯದಶಮಿ ಮೆರವಣಿಗೆ: ಅಂಬಾರಿ ಹೊರುವ ಸಾಗರ ಆನೆಗೆ ಅಂತಿಮ ಹಂತದ ತಾಲೀಮು

ABOUT THE AUTHOR

...view details