ಕರ್ನಾಟಕ

karnataka

105 ಕೆ.ಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ 'ಹನುಮಂತ'- ವಿಡಿಯೋ

By

Published : Apr 2, 2023, 11:46 AM IST

ಹನುಮ ಭಕ್ತನ ಸಾಹಸ

ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ಅಂಜನಾದ್ರಿ ದೇವಸ್ಥಾನ ವಿಶ್ವವಿಖ್ಯಾತಿ ಪಡೆದಿದೆ. ಕ್ಷೇತ್ರ ದಿನದಿಂದ ದಿನಕ್ಕೆ ಒಂದಿಲ್ಲೊಂದು ವಿಶೇಷತೆಗೆ ಸಾಕ್ಷಿಯಾಗುತ್ತಿದೆ. ಇಂದು (ಭಾನುವಾರ) ಭಕ್ತರೊಬ್ಬರು 105 ಕೆ.ಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿ ಸಾಹಸ ಮೆರೆದರು. ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಹನುಮಂತಪ್ಪ ಪೂಜಾರ ಒಂದು ಕ್ವಿಂಟಲ್‌ಗೂ ಹೆಚ್ಚು ಜೋಳ ತುಂಬಿದ್ದ ಚೀಲವನ್ನು ಬೆನ್ನ ಮೇಲೆ ಹೊತ್ತುಕೊಂಡು ಬೆಟ್ಟದ 575 ಮೆಟ್ಟಿಲು ಹತ್ತಿ ಆಂಜನೇಯನಿಗೆ ಭಕ್ತಿ ಸಮರ್ಪಿಸಿದರು.  

ಶಕ್ತಿ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿರುವ ಆಂಜನೇಯನ ಪವಾಡಗಳ ಬಗ್ಗೆ ರಾಮಾಯಣದಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಆಧುನಿಕ ಕಾಲಘಟ್ಟದಲ್ಲಿ ಆಂಜನೇಯನ ಭಕ್ತರು ಆತನ ಮಾದರಿಯಲ್ಲೇ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿರುವುದು ವಿಶೇಷ. ಇತ್ತೀಚೆಗಷ್ಟೆ ಬಾಗಲಕೋಟೆ ಜಿಲ್ಲೆಯ ರಾಯಪ್ಪ ದಪೇದಾರ ಎಂಬ ಭಕ್ತ 101 ಕೆ.ಜಿ ಇದ್ದ ಜೋಳದ ಚೀಲ ಹೊತ್ತು ಇದೇ ಬೆಟ್ಟದ 575 ಮೆಟ್ಟಿಲುಗಳನ್ನು ಹತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ABOUT THE AUTHOR

...view details