ಕರ್ನಾಟಕ

karnataka

ಶಿರಸಿ: ಫೈಬರ್ ಫ್ಯಾಕ್ಟರಿಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮ

By ETV Bharat Karnataka Team

Published : Dec 14, 2023, 5:18 PM IST

ಫೈಬರ್ ಫ್ಯಾಕ್ಟರಿಗೆ ಬೆಂಕಿ

ಶಿರಸಿ (ಉತ್ತರ ಕನ್ನಡ):  ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಫೈಬರ್ ಕಾರ್ಖಾನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ 
ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೊಳಗೀಬಿಸ್​ನಲ್ಲಿ ನಡೆದಿದೆ. ಮಶಿಗದ್ದೆಯ ರಾಘವ ವಿಶ್ವೇಶ್ವರ ಹೆಗಡೆ ಎಂಬುವವರ ಮಾಲೀಕತ್ವದ 'ಧನ್ಯಾ ಇಂಡಸ್ಟ್ರೀಸ್' ಎಂಬ ಹೆಸರಿನ ವಾಹನ ಬಿಡಿ ಭಾಗ ತಯಾರಿಕಾ ಕಾರ್ಖಾನೆ ಇದಾಗಿದ್ದು, ಕಾರಿನ ಡ್ಯಾಷ್ ಬೋರ್ಡ್ ಮತ್ತಿತರ ವಸ್ತುಗಳನ್ನು ತಯಾಸುವ ಫ್ಯಾಕ್ಟರಿ ಇದಾಗಿದೆ. 

ಗುರವಾರ ಬೆಳಗ್ಗೆ ಕಾರ್ಖಾನೆಯಲ್ಲಿ ಸಿಬ್ಬಂದಿಗಳು ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಶಾರ್ಟ್​​ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ತಕ್ಷಣ ಕಾರ್ಮಿಕರು ಎಚ್ಚೆತ್ತುಕೊಂಡರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಸಂಪೂರ್ಣ ಫ್ಯಾಕ್ಟರಿ ಆವರಿಸಿದ್ದು, ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಕೇವಲ ಒಂದೇ ಅಗ್ನಿಶಾಮಕ ವಾಹನ ಇರುವ ಕಾರಣ ನೀರಿನ ಕೊರತೆ ಎದುರಾಗಿತ್ತು. ಶಿರಸಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.    

ABOUT THE AUTHOR

...view details