ಕರ್ನಾಟಕ

karnataka

Watch.. ಶಾಲಾ ಸಮವಸ್ತ್ರ ಧರಿಸಿ ಪುದುಚೇರಿ ಡಿಎಂಕೆ ಶಾಸಕರಿಂದ ಪ್ರತಿಭಟನೆ

By

Published : Feb 3, 2023, 1:38 PM IST

Updated : Feb 3, 2023, 8:40 PM IST

ಶಾಲಾ ಸಮವಸ್ತ್ರ ಧರಿಸಿ ವಿಧಾನಸಭೆಗೆ ತೆರಳಿದ ಶಾಸಕರು

ಪುದುಚೇರಿ: ಪುದುಚೇರಿಯ ಡಿಎಂಕೆ ಶಾಸಕರು ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸೈಕಲ್​ ಮತ್ತು ಲ್ಯಾಪ್​ಟಾಪ್​ ವಿತರಿಸದ ಸರ್ಕಾರವನ್ನು ದಿಕ್ಕರಿಸಿ, ಶಾಸಕರು ಶಾಲಾ ಸಮವಸ್ತ್ರ ಮತ್ತು ಐಡಿ ಕಾರ್ಡ್​ ಧರಿಸಿ ಸೈಕಲ್​ ಮೂಲಕ ಪುದುಚೇರಿ ವಿಧಾನಸಭೆಗೆ ತೆರಳಿದ್ದಾರೆ. 15ನೇ ಪುದುಚೇರಿ ವಿಧಾನಸಭೆಯ ಮೂರನೇ ಅಧಿವೇಶನ ಬೆಳಗ್ಗೆ 9.30ರ ಸುಮಾರಿಗೆ ಆರಂಭವಾಯಿತು.

ಪ್ರತಿಪಕ್ಷದ ನಾಯಕ ಆರ್.ಶಿವ ಅವರ ನೇತೃತ್ವದಲ್ಲಿ, ಆರು ಡಿಎಂಕೆ ಶಾಸಕರು ಸರ್ಕಾರಿ ಶಾಲಾ ಸಮವಸ್ತ್ರವನ್ನು ಧರಿಸಿದ್ದರು.  ಕುತ್ತಿಗೆಗೆ ಗುರುತಿನ ಚೀಟಿಗಳು ಹಾಗೂ ಬೆನ್ನಿಗೆ ಶಾಲಾ ಬ್ಯಾಗ್​ ಹಾಕಿ ಪ್ರತಿಭಟನೆ ನಡೆಸಿದರು.  

ಶಾಲಾ ಶಿಕ್ಷಣ ಇಲಾಖೆ ಹದಗೆಟ್ಟಿದೆ. ಸುಮಾರು 800 ಶಾಲೆಗಳಿದ್ದು, ಶೇ.35ಕ್ಕೂ ಹೆಚ್ಚು ಶಾಲೆಗಳಲ್ಲಿ ಸರಿಯಾದ ಶಿಕ್ಷಕರಿಲ್ಲ. ಸರಕಾರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಲ್ಯಾಪ್ ಟಾಪ್, ಸೈಕಲ್, ಸಮವಸ್ತ್ರ ನೀಡಿಲ್ಲ. ಮೆರಿಟ್ ಸ್ಕಾಲರ್‌ಶಿಪ್ ಕೂಡ ವಿದ್ಯಾರ್ಥಿಗಳಿಗೆ ನೀಡಿಲ್ಲ. ಇಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ, ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಸರಿಯಾದ ಆಹಾರವೂ ಸಿಗುತ್ತಿಲ್ಲ ಎಂದು ಶಾಸಕರು ಆರೋಪಿಸಿದರು.

ದನ್ನೂ ಓದಿ:ಶಿಥಿಲ ನೀರಿನ ಟ್ಯಾಂಕ್ ಕೆಡವಲು ಆಗ್ರಹ: ಟ್ಯಾಂಕ್ ಮೇಲೇರಿ ಪಂಚಾಯತ್ ಸದಸ್ಯರ ಪ್ರತಿಭಟನೆ

Last Updated : Feb 3, 2023, 8:40 PM IST

ABOUT THE AUTHOR

...view details