ಕರ್ನಾಟಕ

karnataka

ಕೊಪ್ಪಳ: ಹುಲಿಗೆಮ್ಮ ದೇವಾಲಯಕ್ಕೆ ಬಂದಿದ್ದ ಭಕ್ತರಿಂದ ಬಸ್ ಹತ್ತಲು ಹರಸಾಹಸ - ವಿಡಿಯೋ ನೋಡಿ

By ETV Bharat Karnataka Team

Published : Nov 28, 2023, 5:58 PM IST

Updated : Nov 28, 2023, 6:36 PM IST

ಬಸ್ ಹತ್ತಲು ಹರಸಾಹಸ

ಕೊಪ್ಪಳ :ಗೌರಿ ಹುಣ್ಣಿಮೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಸುಪ್ರಸಿದ್ದ ಶಕ್ತಿ ದೇವತೆಯಾಗಿರುವ ಹುಲಿಗೆಮ್ಮ ದರ್ಶನಕ್ಕೆ ಸೋಮವಾರ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಮರಳಿ ತಮ್ಮ ಊರುಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ಹುಲಿಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗಿತ್ತು.  

ಸೋಮವಾರ ಒಂದು ದಿನಕ್ಕೆ ಕೊಪ್ಪಳ ಘಟಕ ಸೇರಿದಂತೆ ವಿವಿಧೆಡೆಯಿಂದ ಒಟ್ಟು 160ಕ್ಕೂ ಹೆಚ್ಚು ಬಸ್​ಗಳನ್ನು ನಿಯೋಜಿಸಲಾಗಿತ್ತು. ಆದರೂ ಪ್ರಯಾಣಿಕರು ಬಸ್ ಸೀಟ್​ಗಳಿಗಾಗಿ ಕಿಟಕಿಯಲ್ಲಿ ತೂರಿಕೊಂಡು ಬಸ್​ ಒಳಗೆ ಪ್ರವೇಶ ಮಾಡಿದ್ದರು. ಹೀಗಾಗಿ ವೃದ್ದರು, ಮಹಿಳಾ - ಮಕ್ಕಳು ಬಸ್​ಗಾಗಿ ಕಾದು ಕುಳಿತಿದ್ದರು. 

ಇನ್ನೊಂದೆಡೆ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬಂದಿದ್ದ ಬಾಲಕನೊಬ್ಬ ಸೋಮವಾರ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದನು. ಇಂದು (ಮಂಗಳವಾರ) ಬೆಳಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಯಲಬುರ್ಗಾ ತಾಲೂಕು ಕುದ್ರಿಕೊಟಿಗೆ ಗ್ರಾಮದ ಕನಕಪ್ಪ ಮಾದರ್ (17) ಮೃತ ಬಾಲಕ ಎಂದು ಗುರುತಿಸಲಾಗಿದೆ. ಕುಟುಂಬದವರು, ಪೊಲೀಸ್, ಅಗ್ನಿಶಾಮಕ ಹಾಗೂ ತುರ್ತು ಸೇವೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಬಳಿಕ ಬಾಲಕನ ಮೃತದೇಹ ಸಿಕ್ಕಿದೆ. ಶವವನ್ನು ಪರೀಕ್ಷೆಗಾಗಿ ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ :ಮಂತ್ರಾಲಯ: ತುಂಗಭದ್ರಾ ‌ನದಿಯ ದಡದಲ್ಲಿ ವೈಭವದಿಂದ ಜರುಗಿದ ರಾಯರ ತುಂಗಾರತಿ

Last Updated :Nov 28, 2023, 6:36 PM IST

ABOUT THE AUTHOR

...view details