ಕರ್ನಾಟಕ

karnataka

ತನ್ನ ಕರುವಿನೊಂದಿಗೆ ಶ್ವಾನಕ್ಕೂ ಹಾಲುಣಿಸುವ ಪುಣ್ಯಕೋಟಿ- ವೀಡಿಯೋ

By

Published : Jul 2, 2023, 2:32 PM IST

ಕರುವಿನೊಂದಿಗೆ ಶ್ವಾನಕ್ಕೂ ಹಾಲುಣಿಸುವ ಪುಣ್ಯಕೋಟಿ

ವಿಜಯನಗರ:ಭಾರತದಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನವಿದೆ. ಗೋಮಾತೆಗೆ ಶುಭ ಸಮಾರಂಭಗಳಲ್ಲೂ ವಿಶೇಷ ಪೂಜೆ‌ ಮಾಡುವುದುವುಂಟು. ಗೋವಿನ ಹಾಲು ಮತ್ತು ತಾಯಿ ಹಾಲು ಎರಡೂ ಸಮಾನ ಎಂದು ಹೇಳುತ್ತಾರೆ. ಆದರೆ, ಗೋಮಾತೆ ಶ್ವಾನಕ್ಕೆ ಹಾಲುಣಿಸುವ ಸುದ್ದಿ ಕೇಳಿದ್ದೀರಾ? ಅಚ್ಚರಿಯಾದರೂ ಇದು ನಿಜ. ವಿಜಯನಗರದ ಹೂವಿನ ಹಡಗಲಿ ತಾಲೂಕಿನ ಅಂಗೂರು ಗ್ರಾಮದಲ್ಲಿ ಹಸು ತನ್ನ ಕರುವಿನೊಂದಿಗೆ ಶ್ವಾನಕ್ಕೂ ಹಾಲುಣಿಸುತ್ತಿರುವ ಅಪರೂಪದ ದೃಶ್ಯ ಕಂಡುಬಂದಿದೆ.

ಗ್ರಾಮದ ರೈತ ಶಿಬಿರಪ್ಪ ಎಂಬವರಿಗೆ ಸೇರಿದ ಹಸು ನಿತ್ಯವೂ ತನ್ನ ಕರುವಿನೊಂದಿಗೆ ಪ್ರತಿದಿನ ಮೂರು ಹೊತ್ತು ನಾಯಿಗೂ ಹಾಲುಣಿಸುತ್ತಿದೆ. ಗ್ರಾಮಸ್ಥರೆಲ್ಲ ಈ ದೃಶ್ಯ ನೋಡಿ ನಿಬ್ಬೆರಗಾಗಿದ್ದಾರೆ. 

ನಾಯಿ ನಿಯತ್ತಿಗೆ ಹೆಸರುವಾಸಿ. ಇಲ್ಲಿ ಕೇವಲ ತನ್ನ ಮನೆಯ ಸದಸ್ಯರನ್ನಲ್ಲದೇ ತನ್ನಂತೇ ಮನೆಯ ಭಾಗವಾಗಿರುವ ಹಸುವಿಗೂ ಸೇವಕನಾಗಿದೆ. ಇದೇ ಕಾರಣಕ್ಕೆ ಹಸು ಶ್ವಾನಕ್ಕೂ ಹಾಲುಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಅಚ್ಚರಿಯೆಂದರೆ, ಈ ಹಸು ಶ್ವಾನ ಇದ್ರೆ ಮಾತ್ರ ಹಾಲು ನೀಡುತ್ತದಂತೆ.

ಇದನ್ನೂ ಓದಿ:ಚಿರತೆಯೊಂದಿಗೆ ಹೋರಾಡಿ ಮಾಲೀಕನ ಪ್ರಾಣ ಉಳಿಸಿದ 'ಪುಣ್ಯಕೋಟಿ'; ಚಿರತೆ ಹಿಮ್ಮೆಟ್ಟಿಸಲು ಹಸುವಿಗೆ ಸಾಥ್ ಕೊಟ್ಟ ಶ್ವಾನ!

ABOUT THE AUTHOR

...view details