ಕರ್ನಾಟಕ

karnataka

ತೆಲಂಗಾಣದಲ್ಲಿ ಮುನ್ನಡೆ ಸಾಧಿಸುತ್ತಿರುವ ಕಾಂಗ್ರೆಸ್: ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ

By ETV Bharat Karnataka Team

Published : Dec 3, 2023, 11:37 AM IST

ತೆಲಂಗಾಣದಲ್ಲಿ ಮುನ್ನಡೆ ಸಾಧಿಸುತ್ತಿರುವ ಕಾಂಗ್ರೆಸ್

ಹೈದರಾಬಾದ್​:Celebrations at Telangana Congress office: ತೆಲಂಗಾಣದಲ್ಲಿ 63 ಸ್ಥಾನಗಳಲ್ಲಿಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಪಕ್ಷದ ರಾಜ್ಯ ಘಟಕದ ಕಚೇರಿ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಜತೆಗೆ ಹೈದರಾಬಾದ್‌ನಲ್ಲಿರುವ ಪಕ್ಷದ ರಾಜ್ಯ ಮುಖ್ಯಸ್ಥ ರೇವಂತ್ ರೆಡ್ಡಿ ಅವರ ನಿವಾಸದ ಹೊರಗೆ ಪಟಾಕಿ ಸಿಡಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ 63 ಸ್ಥಾನಗಳಲ್ಲಿ, ಬಿಆರ್‌ಎಸ್ 40 ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಆರ್​ಎಸ್​ನ್ನು ಹಿಂದಿಕ್ಕುತ್ತಿದ್ದ ಹಾಗೇ ಕಾಂಗ್ರೆಸ್​ ಪಕ್ಷದವರು ಬೈ ಬೈ ಕೆಸಿಆರ್​ ಎಂಬ ಘೋಷಣೆಗಳನ್ನು ಮೊಳಗುತ್ತಿದ್ದಾರೆ. 

​49 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ನವೆಂಬರ್​ 30 ರಂದು ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 35,655 ಮತಗಟ್ಟೆಗಳ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಚಾರ್ಮಿನಾರ್, ಭದ್ರಾಚಲಂ ಮತ್ತು ಆಶ್ವರಪೇಟ ಕ್ಷೇತ್ರಗಳ ಮತ ಎಣಿಕೆ ಅಂತಿಮ ಸುತ್ತುಗಳು ತಲುಪುತ್ತಿದ್ದು, ಈ ಕ್ಷೇತ್ರಗಳ ಫಲಿತಾಂಶ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ. ಇನ್ನು ಕಾಂಗ್ರೆಸ್​ ಸಿಎಂ ಅಭ್ಯರ್ಥಿಯಾಗಿರುವ ರೇವಂತ್​ರೆಡ್ಡಿ ಕಾಮಾರೆಡ್ಡಿ ಮತ್ತು ಕೋಡಂಗಲ್​ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ:ತೆಲಂಗಾಣ ಚುನಾವಣೆ: ಬಹುಮತದತ್ತ ಕಾಂಗ್ರೆಸ್​, ಕಾಮಾರೆಡ್ಡಿ ಕ್ಷೇತ್ರದಲ್ಲಿ ಸಿಎಂ ಕೆಸಿಆರ್​ಗೆ ಹಿನ್ನಡೆ, ರೇವಂತ ರೆಡ್ಡಿಗೆ ಮುನ್ನಡೆ

TELANGANA119/119

PARTY

BRS

INC

BJP

MIM

OTH

LEAD 40 63 10 4 1
WON 0 1 0 0 0
CHANGE -48 +45 +9 -3 -3

ABOUT THE AUTHOR

...view details