ಕರ್ನಾಟಕ

karnataka

ಸಿಎಂ ಬೊಮ್ಮಾಯಿ ಪರ ಪತ್ನಿ ಚೆನ್ನಮ್ಮರಿಂದ ಮತಯಾಚನೆ- ವಿಡಿಯೋ

By

Published : Apr 16, 2023, 11:01 PM IST

ಚೆನ್ನಮ್ಮ ಬೊಮ್ಮಾಯಿ

ಹಾವೇರಿ : ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಹಾವೇರಿ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಣಕ್ಕಿಳಿದಿರುವ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ. ಬೊಮ್ಮಾಯಿ ಶನಿವಾರ ನಾಮಪತ್ರ ಸಲ್ಲಿಸುವ ಮೂಲಕ ಮತಯಾಚನೆ ಶುರು ಮಾಡಲಿದ್ದಾರೆ. ಕ್ಷೇತ್ರದಲ್ಲಿ ಪತ್ನಿ ಚೆನ್ನಮ್ಮ ಬೊಮ್ಮಾಯಿ ಈಗಾಗಲೇ ಮತಯಾಚನೆಯಲ್ಲಿ ನಿರತರಾಗಿದ್ದಾರೆ.

ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುನವಳ್ಳಿ, ನಾರಾಯಣಪುರ, ಬಾಡ, ಮೂಕಬಸರೀಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪತಿ ಪರ ಮತಯಾಚನೆ ಮಾಡಿದರು. "ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯ ಮಾಡಿದ್ದಾರೆ. ಜನರಿಗೆ ರಸ್ತೆ, ನೀರು, ವಸತಿ, ಶಿಕ್ಷಣ ಉದ್ಯೋಗ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕ್ಷೇತ್ರದ ಜನರು ಬೊಮ್ಮಾಯಿ ಪರ ಇದ್ದು ಈ ಬಾರಿ ವಿಜಯಮಾಲೆ ಧರಿಸುವುದರಲ್ಲಿ ಎರಡು ಮಾತಿಲ್ಲ" ಎಂದು ಚೆನ್ನಮ್ಮ ಬೊಮ್ಮಾಯಿ ಹೇಳಿದರು. 

ಮಹಿಳಾ ಸಂಘದ ಸದಸ್ಯೆಯರು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷೆ ಶೋಭಾ ನಿಶ್ಸೀಮ ಗೌಡರ್ ಸೇರಿದಂತೆ ಹಲವರು ಸಾಥ್ ನೀಡಿದರು.   

ಇದನ್ನೂ ಓದಿ :ಪ್ರಚಾರಕ್ಕೆ ತೆರಳಿದ ಬಿ.ವೈ.ವಿಜಯೇಂದ್ರರಿಗೆ ತರಲಘಟ್ಟ ತಾಂಡಾದಲ್ಲಿ ವಿರೋಧ

ABOUT THE AUTHOR

...view details