ಕರ್ನಾಟಕ

karnataka

ಎಕ್ಸಲೇಟರ್, ಗೇರ್​​ ಜಾಮ್; ನಿಯಂತ್ರಣ ಕಳೆದುಕೊಂಡ ಕಾರು ಚರಂಡಿಗೆ-ವಿಡಿಯೋ

By ETV Bharat Karnataka Team

Published : Jan 12, 2024, 9:17 AM IST

ಕಾರು ಅಪಘಾತ

ಮಡಿಕೇರಿ:ರಿವರ್ಸ್​ ತೆಗೆಯುವ ಸಂದರ್ಭದಲ್ಲಿ ಕಾರಿನ ಎಕ್ಸಲೇಟರ್ ಮತ್ತು ಗೇರ್​​ ಜಾಮ್ ಆಗಿದೆ. ಬಳಿಕ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬಿದ್ದಿದೆ. ಈ ಘಟನೆ ಕೊಡಗಿನಲ್ಲಿ ನಡೆಯಿತು.

ವೈದ್ಯರೊಬ್ಬರಿಗೆ ಸೇರಿದ ಬಿಳಿ ಬಣ್ಣದ ಕಾರು ಇದಾಗಿದ್ದು, ರಿವರ್ಸ್​ ತೆಗೆಯುವಾಗ ಹಿಂಬದಿಗೆ ದಿಢೀರ್ ಚಾಲನೆಗೊಂಡಿದೆ. ರಸ್ತೆಯಲ್ಲಿ ಹೋಗುತ್ತಿದ್ದ ರಿಕ್ಷಾಕ್ಕೆ ಗುದ್ದಿದೆ. ನಂತರ ಎರಡು ಬಾರಿ ಯದ್ವಾತದ್ವಾ ಮುನ್ನುಗ್ಗಿ ತಡೆಗೋಡೆಗೂ ಬಡಿದು, ಚರಂಡಿಗೆ ಉರುಳಿದೆ. ಮಡಿಕೇರಿ ಮತ್ತು ಮಂಗಳೂರು ರಸ್ತೆಯ ಗ್ರೀನ್​​ ಲ್ಯಾಂಡ್ ಹೋಟೆಲ್ ಸಮೀಪ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರು ನಿಯಂತ್ರಣ ಕಳೆದುಕೊಂಡ ಸಂದರ್ಭದಲ್ಲಿ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಮತ್ತು ಜನ ಸಂಚಾರವಿರಲಿಲ್ಲ. ಹೀಗಾಗಿ, ಹೆಚ್ಚಿನ ಅನಾಹುತ ತಪ್ಪಿದೆ. ಕಾರು ತಿರುಗುತ್ತಿದ್ದ ರಭಸಕ್ಕೆ ಸುತ್ತಮುತ್ತಲಿನ ಜನರು ಗಾಬರಿಗೊಂಡಿದ್ದರು. ಚರಂಡಿಗೆ ಬಿದ್ದ ಕಾರಿನ ಪರಿಶೀಲನೆ ನಡೆಸಿದಾಗ ಎಕ್ಸಲೇಟರ್ ಮತ್ತು ಗೇರ್​​ ಜಾಮ್ ಆಗಿರುವುದು ಗಮನಕ್ಕೆ ಬಂದಿದೆ. ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ.

ಇದನ್ನೂ ಓದಿ:ಕಾರು ಅಪಘಾತ: ಮೆಹಬೂಬಾ ಮುಫ್ತಿ ಪ್ರಾಣಾಪಾಯದಿಂದ ಪಾರು

ABOUT THE AUTHOR

...view details