ತಿರುವಣ್ಣಾಮಲೈನಲ್ಲಿ ಕಾರ್ತಿಗೈ ದೀಪಂ ಉತ್ಸವ ಸಂಭ್ರಮ: ಸಾವಿರಾರು ಭಕ್ತರು ಭಾಗಿ!
ತಿರುವಣ್ಣಾಮಲೈ(ತಮಿಳುನಾಡು): ತಿರುವಣ್ಣಾಮಲೈಯ ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ಕಾರ್ತಿಗೈ ದೀಪಂ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಪ್ರತೀ ವರ್ಷ ಸಾವಿರಾರು ಭಕ್ತರು ಈ ಉತ್ಸವ ಕಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ. ಈ ವರ್ಷದ ದೀಪೋತ್ಸವವು ನವೆಂಬರ್ 27 ರಂದು ಬೆಳಗ್ಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದು, 9 ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ವಿವಿಧ ವಾಹನಗಳಲ್ಲಿ ಪಂಚಮೂರ್ತಿ ಮದವೇತಿ ಉಳ ಆಚರಣೆಯನ್ನು ನಡೆಸಿಕೊಂಡು ಬರಲಾಯಿತು. ಇಂದು ದೀಪೋತ್ಸವದ 10ನೇ ದಿನ. ಬೆಳಗ್ಗೆ ಅಣ್ಣಾಮಲೈಯಾರ್ ದೇವಸ್ಥಾನವನ್ನು ತೆರೆಯಲಾಗಿದ್ದು, ಅಣ್ಣಾಮಲೈಯಾರ್ ಮತ್ತು ಉಣ್ಣಾಮಲೈ ದೇವಿಗೆ ವಿಶೇಷ ಅಭಿಷೇಕ ಮತ್ತು ಆರಾಧನೆಯನ್ನು ಮಾಡಲಾಯಿತು. ಇಂದು ಬೆಳಗಿನ ಜಾವ 4 ಗಂಟೆಗೆ ಅಣ್ಣಾಮಲೈಯಾರ್ ಗರ್ಭಗುಡಿಯ ಮುಂಭಾಗದಲ್ಲಿ ಪಾರಣಿ ದೀಪವನ್ನು ಬೆಳಗಿಸಲಾಯಿತು. ಈ ಪರಣಿ ದೀಪ ದರ್ಶನದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಇಂದು ಸಂಜೆ 6 ಗಂಟೆಗೆ ದೇವಸ್ಥಾನದ ಹಿಂಭಾಗದ 2,668 ಅಡಿ ಎತ್ತರದ ಬೆಟ್ಟದಲ್ಲಿ ಮಹಾ ದೀಪ ಬೆಳಗಲಿದೆ.
Last Updated : Feb 3, 2023, 8:34 PM IST