ಕರ್ನಾಟಕ

karnataka

ಸೊರಬ: ಬಹು ಬೆಳೆ ತೋಟಕ್ಕೆ ಆಕಸ್ಮಿಕ ಬೆಂಕಿ; ಅಪಾರ ಪ್ರಮಾಣದ ಬೆಳೆ ನಾಶ

By

Published : Feb 20, 2023, 9:13 PM IST

ಹತ್ತು ಎಕರೆ ಬಹು ಬೆಳೆಯ ತೋಟಕ್ಕೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಬೆಳೆ ನಾಶ

ಶಿವಮೊಗ್ಗ: ಅನಾನಸ್, ಅಡಕೆ, ಶುಂಠಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಪ್ರಮಾಣದ ಬೆಳೆ ಸುಟ್ಟು ನಾಶವಾಗಿರುವ ಘಟನೆ ಸೊರಬ ತಾಲೂಕು ಚಂದ್ರಗುತ್ತಿ ಬಳಿಯ ಕಮರೂರು ಗ್ರಾಮದಲ್ಲಿ ನಡೆದಿದೆ. ಜಮೀನಿನ ಮಾಲೀಕ ಅಬ್ಸರ್ ಮೊಹಮ್ಮದ್ 10 ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಅನಾನಸ್, ನಾಲ್ಕು ಎಕರೆಯಲ್ಲಿ ಶುಂಠಿ ಬೆಳೆದಿದ್ದರು. ಉಳಿದ ಎರಡು ಎಕರೆಯಲ್ಲಿ ಅಡಕೆ ಸಸಿಗಳೂ ಸೇರಿದಂತೆ 40 ತೆಂಗಿನ ಸಸಿಗಳನ್ನು ಬೆಳೆಸುತ್ತಿದ್ದರು. ಬೆಳೆಗಳಲ್ಲದೇ ಬೆಳೆಗೆ ನೀರು ಹಾಯಿಸಲು ಹಾಕಿದ್ದ ಪೈಪ್​ಗಳು ಬೆಂಕಿಗೆ ಆಹುತಿಯಾಗಿವೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ಆರಿಸಿದ್ದಾರೆ. ಅಕ್ಕಪಕ್ಕದ ತೋಟಗಳಿಗೆ ಬೆಂಕಿ ಹರಡುವುದನ್ನು ತಡೆದಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ABOUT THE AUTHOR

...view details