ಕರ್ನಾಟಕ

karnataka

ಮುಂದಿನ‌ ಸಿಎಂ ಸಿದ್ದರಾಮಯ್ಯ ಎಂದು ಜೈಕಾರ ಕೂಗಿದ ಅಭಿಮಾನಿ

By

Published : Aug 11, 2022, 11:53 AM IST

Updated : Feb 3, 2023, 8:26 PM IST

ಹುಬ್ಬಳ್ಳಿ : ದಾವಣಗೆರೆ ಸಿದ್ದರಾಮೋತ್ಸವದ ಬಳಿಕ ಇದೇ ಮೊದಲ ಬಾರಿಗೆ ಮುಂದಿನ ಸಿಎಂ ಸಿದ್ದರಾಮಯ್ಯಗೆ ಜೈ ಎಂಬ ಘೋಷಣೆ ಮೊಳಗಿದೆ. ಬಾದಾಮಿಯಿಂದ ಬೆಂಗಳೂರಿಗೆ ತೆರಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಮುಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ ಎಂದು ಘೋಷಣೆ ‌ಕೂಗಿದರು. ಸಿದ್ದರಾಮೋತ್ಸವ ಹಾಗೂ ಹುಬ್ಬಳ್ಳಿಯಲ್ಲಿ ‌ನಡೆದ ಸಭೆಯಲ್ಲಿ ವ್ಯಕ್ತಿ ಪೂಜೆ ಮಾಡಬೇಡಿ. ಯಾರು ಸಿಎಂ ಅಭ್ಯರ್ಥಿ ಘೋಷಿಸಬೇಡಿ ಎಂದು ಕಾಂಗ್ರೆಸ್ ಸ್ಪಷ್ಟ ಸಂದೇಶ ನೀಡಿತ್ತು. ಆದರೆ, ಮತ್ತೆ ಮತ್ತೆ ಘೋಷಣೆ ಕೇಳಿ ಬಂದಿರುವುದು ಕಾಂಗ್ರೆಸ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Last Updated : Feb 3, 2023, 8:26 PM IST

ABOUT THE AUTHOR

...view details