ಹೈದರಾಬಾದ್:ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಸಹ ಬಳಸಲಾಗುತ್ತಿದೆ. ಇದನ್ನು ಚಿಂಪಾಂಜಿ ಪೂಪ್‌ನಿಂದ ಪ್ರತ್ಯೇಕಿಸಲಾಗಿರುವ ಅಡೆನೊ ವೈರಸ್‌ನಿಂದ ತಯಾರಿಸಲಾಗುತ್ತಿದ್ದು, ಇದನ್ನು ತಳೀಯವಾಗಿ ಬದಲಾಯಿಸಲಾಗಿದೆ. ಆದ್ದರಿಂದ ಅದು ಮಾನವರಲ್ಲಿ ಬೆಳೆಯಲು ಅಸಾಧ್ಯವಾಗಿದೆ.
ಈಗ ಈ ಕೋವಿಡ್ -19 ಲಸಿಕೆಯನ್ನು ಅಸ್ಟ್ರಾಜೆನೆಕಾ ಎಂದು ಕರೆಯಲಾಗುತ್ತಿದೆ. ಇದನ್ನು ಮೊದಲು ಎಝೆಡ್ಡಿ1222 ಎಂದು ಕರೆಯಲಾಗುತ್ತಿತ್ತು.
ಎಝೆಡ್ಡಿ1222ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ವ್ಯಾಕ್ಸಿಟೆಕ್ ಆವಿಷ್ಕರಿಸಿದೆ. ಇದನ್ನು ಚಿಂಪಾಂಜಿಗಳಲ್ಲಿ ಶೀತಕ್ಕೆ ಕಾರಣವಾಗುವ ವೈರಸ್ ಪಡೆದು ಅದನ್ನು ದುರ್ಬಲಗೊಳಿಸಿ, ಅದಕ್ಕೆ ಸಾರ್ಸ್ ಸಿಒವಿ-2 ಎಂಬ ಕೊರೊನಾ ಸೋಂಕಿನಲ್ಲಿರುವ ಮುಳ್ಳಿನಂತಹ ವಂಶವಾಹಿ ವಸ್ತುವನ್ನು ಸೇರಿಸಿ ತಯಾರಿಸಲಾಗಿದೆ.