ಕರ್ನಾಟಕ

karnataka

ಹಂದಿಗೆ ಹಾಲುಣಿಸಿದ ಗೋಮಾತೆ.. ಭಕ್ತರಿಗೆ ಅಚ್ಚರಿ ಮೂಡಿಸಿದ ವಿಸ್ಮಯ ಘಟನೆ

By

Published : Aug 22, 2022, 11:02 PM IST

Pig drink cow milk in Yadadri
ವರಾಹನಿಗೆ ಹಾಲುಣಿಸಿದ ಗೋಮಾತೆ ()

ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೆ ಸಂಭ್ರಮದಿಂದ ಆರಂಭವಾಗಿದ್ದು, ಪ್ರಥಮ ದಿನವೇ ವೇಣುಗೋಪಾಲ ಸ್ವಾಮಿಗೆ ವಿಶಿಷ್ಟ ಅಲಂಕಾರ, ಉಯ್ಯಾಲೆ ಸುಸಂದರ್ಭಲ್ಲಿ ಗೋಮಾತೆ ತನ್ನ ಕರುವಿನೊಂದಿಗೆ ಆವರಣದಲ್ಲಿ ಸಂಚರಿಸುತ್ತಿರುವಾಗ ದೇವರ ಬಾವಿ ಕಡೆಯಿಂದ ಬಂದ ವರಾಹ(ಹಂದಿ) ನೋಡು ನೋಡುತ್ತಲೇ ಗೋಮಾತೆಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಸವಿಯಲು ಆರಂಭಿಸಿತು.

ಯಾದಗಿರಿ :ಗೋವನ್ನು ತಾಯಿಯಾಗಿ, ಗೋಮಾತೆಯಾಗಿ ಪೂಜಿಸುವ ನಾಡಿನಲ್ಲಿ ಅಮೃತಸಮಾನವಾದ ಹಾಲನ್ನು ವಿಷ್ಣುವಿನ ರೂಪವಾದ ವರಾಹನಿಗೆ ಹಾಲುಣಿಸಿದ ವಿಸ್ಮಯಕಾರಿ ಘಟನೆ ಜಿಲ್ಲೆಯಲ್ಲಿ ಸುರಪುರ ನಗರದ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ನಡೆದಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿತು.

ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೆ ಸಂಭ್ರಮದಿಂದ ಆರಂಭವಾಗಿದ್ದು, ಪ್ರಥಮ ದಿನವೇ ವೇಣುಗೋಪಾಲ ಸ್ವಾಮಿಗೆ ವಿಶಿಷ್ಟ ಅಲಂಕಾರ, ಉಯ್ಯಾಲೆ ಸುಸಂದರ್ಭಲ್ಲಿ ಗೋಮಾತೆ ತನ್ನ ಕರುವಿನೊಂದಿಗೆ ಆವರಣದಲ್ಲಿ ಸಂಚರಿಸುತ್ತಿರುವಾಗ ದೇವರ ಬಾವಿ ಕಡೆಯಿಂದ ಬಂದ ಹಂದಿಯೊಂದು ನೋಡು ನೋಡುತ್ತಲೇ ಗೋಮಾತೆಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಸವಿಯಲು ಆರಂಭಿಸಿತು. ಗೋಮಾತೆ ಶಾಂತ ಚಿತ್ತದಿಂದ ಕದಲದೆ ಹಾಲು ನೀಡುತ್ತಿದ್ದರೆ ಇನ್ನೊಂದರೆ ಕರು ಸುತ್ತ ತಿರುಗುತ್ತಿತ್ತು. ಗೋಮಾತೆಯ ಮಮತೆಯಲ್ಲಿ ಕರು ಮಿಂದೆದ್ದಿತು.

ವರಾಹ ತನ್ನ ಗೋಮಾತೆಯ ಹಾಲು ಕುಡಿಯುತ್ತಿರುವುದನ್ನು ಭಕ್ತರು ನೋಡುತ್ತಿರುವಾಗ ಕರು ಅಡ್ಡಲಾಗಿ ಬಂದು ನಿಲ್ಲುತ್ತಿತ್ತು. ಭಕ್ತರು, ಪೊಲೀಸರು, ಮಹಿಳೆಯರು, ಮಕ್ಕಳು ಬೆಕ್ಕಸ ಬೆರಗು ಗಣ್ಣಿನಿಂದ ನೋಡುತ್ತಿದ್ದರು. ಭಕ್ತರು ಕೃಷ್ಣ ಜನ್ಮಾಷ್ಟಮಿಯೆಂದೇ ಇಂತಹ ಘಟನೆ ನಡೆಯುತ್ತಿರುವುದು ನೋಡಿದರೆ ರಾಜ್ಯದಲ್ಲಿ ಶುಭ ಗಳಿಗೆಯೂ ಆರಂಭವಾಗುವ ಲಕ್ಷಣಗಳಿವೆ ಎನ್ನುವ ಮಾತುಗಳು ಕೇಳಿ ಬಂದವು. ಮಕ್ಕಳು ಸೇರಿದಂತೆ ಕೆಲವರು ಗೋಮಾತೆಯಲ್ಲಿ ವರಾಹ ಹಾಲು ಕುಡಿಯುವ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು.

ಇದನ್ನೂ ಓದಿ:ಶಿರಾಳಕೊಪ್ಪದ ಸ್ಟೇಡಿಯಂ ಗಲಾಟೆ ಪ್ರಕರಣ : ಬೆಚ್ಚಿಬಿದ್ದ ಜನರು

ABOUT THE AUTHOR

...view details