ಕರ್ನಾಟಕ

karnataka

ನಾರಾಯಣಪೂರ ಎಡದಂಡೆ ಕಾಲುವೆ ಕುಸಿತ: ಸಮಸ್ಯೆಗೆ ಮುಕ್ತಿ ಕಲ್ಪಿಸುವಂತೆ ರೈತರ ಆಗ್ರಹ

By

Published : Mar 15, 2022, 8:14 PM IST

ಕಾಲುವೆ ನವೀಕರಣದ ವೇಳೆ ಕಾಲುವೆಯ ಕೆಳಭಾಗದಲ್ಲಿರುವ ಮಣ್ಣು ತೆಗೆದು ಹೊಸ ಮಣ್ಣು ಹಾಕಿಲ್ಲ. ಹೀಗಾಗಿ ಮಣ್ಣಿನ ಶಕ್ತಿ ಕಳೆದುಕೊಂಡು ಕಾಲುವೆ ನವೀಕರಣ ಕಾಮಗಾರಿ ಕೈಗೊಳ್ಳುವ ವೇಳೆ ಹಳೆ ಮಣ್ಣು ತೆಗೆಯದೇ ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವುದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ನಾರಾಯಣಪೂರ ಎಡದಂಡೆ ಕಾಲುವೆ ಕುಸಿತ:
ನಾರಾಯಣಪೂರ ಎಡದಂಡೆ ಕಾಲುವೆ ಕುಸಿತ:

ಯಾದಗಿರಿ : ಜಿಲ್ಲೆಯ ಹುಣಸಗಿ ಸಮೀಪದ ನಾರಾಯಣಪೂರ ಎಡದಂಡೆ ಮುಖ್ಯ ಕಾಲುವೆಯ ಅಗ್ನಿ ಗ್ರಾಮದ 62 ಕಿ.ಮೀ ಬಳಿ ಕುಸಿದಿದ್ದು, ಕಾಲುವೆಗೆ ಶಾಶ್ವತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಪ್ರತಿ ಸಲವೂ ಕಾಲುವೆ ಕುಸಿತ ಕಂಡಾಗ ತಾತ್ಕಾಲಿಕವಾಗಿ ಮರಳಿನ ಮೂಟೆ ಹಾಕಿ ದುರಸ್ತಿ ಮಾಡಲಾಗುತ್ತಿದೆ. ಮತ್ತೆ ಮುಂದಿನ ಬಾರಿ ಅದೇ ಸ್ಥಳದಲ್ಲಿ ಕಾಲುವೆ ಕುಸಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಕಾಲುವೆ ಭಾಗದ ರೈತರು ಒತ್ತಾಯಿಸಿದ್ದಾರೆ.

ನಾರಾಯಣಪೂರ ಎಡದಂಡೆ ಕಾಲುವೆ ಕುಸಿತ

ಸದ್ಯ ಬೇಸಿಗೆ ಆರಂಭವಾಗಿರುವ ಕಾರಣ ಕಾಲುವೆಗಳಿಗೆ ಹೆಚ್ಚಿನ ನೀರು ಹರಿಸಲಾಗುತ್ತಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಸಾವಿರಾರು ಕ್ಯೂಸೆಕ್ ನೀರು ಹರಿಯುವ ವೇಳೆ ಕಾಲುವೆ ಕುಸಿದಿದ್ದರೆ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಕಾಲುವೆ ವಿಜಯಪುರದ ಇಂಡಿ, ಕಲಬುರಗಿಯ ಜೇವರ್ಗಿ, ಶಹಾಪುರದ ಮತ್ತು ಮೂಡಬೂಳ ನೀರು ಪೂರೈಕೆಯಾಗುವ ಕಾಲುವೆಯಾಗಿದೆ. ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರು ಪೂರೈಸುವ ಮುಖ್ಯ ಕಾಲುವೆ ಇದಾಗಿದೆ.

ಮುಖ್ಯ ಕಾಲುವೆ ನವೀಕರಣಗೊಳಿಸುವ ವೇಳೆ ಅಧಿಕಾರಿ ಹಾಗೂ ಗುತ್ತಿಗೆದಾರರಿಂದ ಸಂಪೂರ್ಣ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಕಾಲುವೆ ನವೀಕರಣದ ವೇಳೆ ಕಾಲುವೆಯ ಕೆಳಭಾಗದಲ್ಲಿರುವ ಮಣ್ಣು ತೆಗೆದು ಹೊಸ ಮಣ್ಣು ಹಾಕಿಲ್ಲ. ಹೀಗಾಗಿ ಮಣ್ಣಿನ ಶಕ್ತಿ ಕಳೆದುಕೊಂಡು ಕಾಲುವೆ ನವೀಕರಣ ಕಾಮಗಾರಿ ಕೈಗೊಳ್ಳುವ ವೇಳೆ ಹಳೆ ಮಣ್ಣು ತೆಗೆಯದೇ ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವುದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

2021-2022ನೇ ಸಾಲಿನಲ್ಲಿ ಗುತ್ತಿಗೆದಾರ ಎಂ.ವೈ. ಕಟ್ಟಿಮನಿ ಅವರಿಂದ ಅಗ್ನಿ ಗ್ರಾಮದ ಬಳಿ ಕುಖ್ಯ ಕಾಲುವೆ 62 ರಿಂದ 68 ಕಿ.ಮೀ. ವರೆಗೆ ಅಂದಾಜು 52 ಕೋಟಿ ವೆಚ್ಚದಲ್ಲಿ ಕಾಲುವೆ ನವೀಕರಣ ಮಾಡಲಾಗಿದೆ. ಕಾಲುವೆ ನೀರು ಹರಿಸಿದಾಗ ನೀರು ಮಣ್ಣಿನಲ್ಲಿ ಸೇರಿ ಮಣ್ಣು ತೇವಾಂಶವಾಗಿ ಬಿರುಕು ಬಿಡುತ್ತಿದೆ. ನೀರಾವರಿ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಖರ್ಚು ಮಾಡುವ ಸರ್ಕಾರ ಶಾಶ್ವತ ಸಮಸ್ಯೆಗೆ ಮುಕ್ತಿ ಕಲ್ಪಿಸಬೇಕಿದೆ ಎನ್ನುವುದು ರೈತರ ಆಗ್ರಹವಾಗಿದೆ.

ABOUT THE AUTHOR

...view details