ಕರ್ನಾಟಕ

karnataka

ಬಾವಿಯಲ್ಲಿ ತಾಯಿ-ಮಗುವಿನ ಶವ ಪತ್ತೆ : ಆತ್ಮಹತ್ಯೆ ಶಂಕೆ

By

Published : Oct 9, 2021, 3:27 PM IST

Updated : Oct 9, 2021, 3:43 PM IST

ಸ್ಥಳಕ್ಕೆ ಸುರಪುರ ಪೊಲೀಸ್​ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ. ತಾಯಿ-ಮಗುವಿನ ಮೃತದೇಹವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ..

Mother and child dead body found in well
ಬಾವಿಯಲ್ಲಿ ತಾಯಿ-ಮಗುವಿನ ಶವ ಪತ್ತೆ

ಸುರಪುರ(ಯಾದಗಿರಿ):ತಾಲೂಕಿನ ರತ್ತಾಳ ಮಾರ್ಗ ಮಧ್ಯದಲ್ಲಿರುವ ಬಾವಿಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಾವಿಯಲ್ಲಿ ತಾಯಿ-ಮಗುವಿನ ಶವ ಪತ್ತೆ

ಮೃತರನ್ನು ದೇವಮ್ಮ (25) ಹಾಗೂ ಬೀರಲಿಂಗ(4) ಎಂದು ಗುರುತಿಸಲಾಗಿದೆ. ಹಸನಾಪುರದ ನಿವಾಸಿಯಾಗಿರುವ ಮೃತ ಮಹಿಳೆಯು ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ. ಗಂಡನಿಗೆ ಮಾತು ಕೂಡ ಬರುತ್ತಿರಲಿಲ್ಲ. ಸಾಲ ಪಡೆದು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸುರಪುರ ಪೊಲೀಸ್​ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ. ತಾಯಿ-ಮಗುವಿನ ಮೃತದೇಹವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಿದ್ದ ಮೈಸೂರು ವಿವಿ ಗೋಲ್ಡ್ ಮೆಡಲಿಸ್ಟ್ ನಿಗೂಢ ಸಾವು.. ಪತಿ ಮೇಲೆ ಗುಮಾನಿ

Last Updated : Oct 9, 2021, 3:43 PM IST

ABOUT THE AUTHOR

...view details