ಕರ್ನಾಟಕ

karnataka

ಮನೆ ಮನೆಗೆ ತೆರಳಿ ನರೇಗಾ ಜಾಬ್​ ಕಾರ್ಡ್​ ವಿತರಿಸಿದ ಜಿ.ಪಂ ಕಾರ್ಯದರ್ಶಿ

By

Published : May 29, 2020, 10:15 PM IST

ತಾಲೂಕಿನಲ್ಲಿ ಲಾಕ್​ಡೌನ್​ ಪರಿಣಾಮ ಕೆಲವಿಲ್ಲದೇ ಖಾಲಿ ಇರುವ ವಲಸೆ ಕಾರ್ಮಿಕರನ್ನು ಗುರುತಿಸಿ ಮನೆಗೆ ತೆರಳಿ ಪ್ರತಿ ಕುಟುಂಬಕ್ಕೆ 100 ದಿನಗಳ ಕೆಲಸ ಮತ್ತು 275 ರೂ. ಕೂಲಿ ನೀಡಲಾಗುವುದು ಎಂದು ಜನರಿಗೆ ನೂತನ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ತಿಳಿಸಿದರು.

gurumitkal-job-card-distribution
ಗುರುಮಠಕಲ್​ ಜಿ.ಪಂ ಕಾರ್ಯದರ್ಶಿ

ಗುರುಮಠಕಲ್: ತಾಲೂಕಿನ ಆಡಳಿತಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಂಡಿರುವ ಜಿಲ್ಲಾ ಪಂಚಾಯತ್​​​​ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಮೊದಲ ಬಾರಿಗೆ ಸಾಮಾನ್ಯ ಸಭೆ ನಡೆಸಿದರು.

ಲಾಕ್​ಡೌನ್ ಪರಿಣಾಮ ಬೆಂಗಳೂರಿನಿಂದ ಹಿಂದಿರುಗಿದ್ದ ತಾಲೂಕಿನ ಗಾಜರಕೋಟ ಗ್ರಾಮದ 700 ಜನರಿಗೆ ಉದ್ಯೋಗ ಖಾತ್ರಿಯ ಜಾಬ್​ ಕಾರ್ಡ್​ ವಿತರಿಸುವ ಮೂಲಕ ಉದ್ಯೋಗ್ಯ ಖಾತ್ರಿ ಯೋಜನೆಗೆ ಚಾಲನೆ ನೀಡಿದರು.

ಮನೆ ಮನೆಗೆ ತೆರಳಿ ನರೇಗಾ ಜಾಬ್​ ಕಾರ್ಡ್​ ವಿತರಿಸಿದ ಗುರುಮಠಕಲ್​ ಜಿ.ಪಂ ಕಾರ್ಯದರ್ಶಿ

ಗ್ರಾಮದ ಮನೆ ಮನೆಗೆ ತೆರಳಿ ವಲಸೆ ಕಾರ್ಮಿಕರನ್ನು ಗುರುತಿಸಿ ಪ್ರತಿ ಕುಟುಂಬಕ್ಕೆ 100 ದಿನಗಳ ಕೆಲಸ, ದಿನಕ್ಕೆ 275 ರೂಪಾಯಿಯಂತೆ ಕೂಲಿ ನೀಡಲಾಗುವುದು. ಹೆಚ್ಚುವರಿಯಾಗಿ ಸಲಕರಣೆಗಳಿಗೆ 10 ರೂ. ಪಾವತಿಸಲಾಗುವುದು. ಪ್ರತಿ ವಾರಕ್ಕೊಮ್ಮೆ ಕೂಲಿ ಪಾವತಿಸಲಾಗುವುದು ಎಂದು ಕೂಲಿಕಾರರಿಗೆ ತಿಳಿಸಿದರು. ಅಲ್ಲದೇ ಉದ್ಯೋಗ ಖಾತ್ರಿಗೆ ಸಂಬಂಧಪಟ್ಟಂತಹ ಸಂದೇಹ ಮತ್ತು ಸಮಸ್ಯೆಗಳ ಬಗ್ಗೆ ಕೂಲಿಗಾರರ ಜೊತೆ ಸಂವಾದ ನಡೆಸಿ ಸಮಸ್ಯೆಗಳನ್ನು ಪರಿಹರಿಸಿದರು

ಸದ್ಯ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ನೂರಾರು ಕಾರ್ಮಿಕರಿಗೆ ಸರ್ಕಾರ ಕೆಲಸ ಒದಗಿಸಲಾಗಿದೆ. ಗ್ರಾಮದ ರಸ್ತೆಗಳು, ಚರಂಡಿ, ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಬಾವಿ ಕೊರೆಯುವ ಕೆಲಸಗಳು ಬಿಡುವಿಲ್ಲದೇ ನಡೆಯುತ್ತಿವೆ.

ABOUT THE AUTHOR

...view details