ಕರ್ನಾಟಕ

karnataka

ಭಾರೀ ಮಳೆಗೆ ಉಕ್ಕಿಹರಿದ ದಬದಬೆ ಜಲಪಾತ: ನದಿಯಂತಾದ ಗುರುಮಠಕಲ್​ ರಸ್ತೆ

By

Published : Aug 4, 2022, 11:35 AM IST

Updated : Aug 4, 2022, 12:38 PM IST

Water flow in roads

ಬಹಳ ವರ್ಷಗಳ ನಂತರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಪ್ರಖ್ಯಾತ ದಬದಬೆ ಜಲಪಾತ ಭೋರ್ಗರೆದು ಹರಿಯುತ್ತಿದೆ. ರಸ್ತೆಗಳೂ ನದಿಯಂತಾಗಿ, ಅಂಗಡಿ ಮನೆಗಳಿಗೆಲ್ಲ ನೀರು ನುಗ್ಗಿದೆ.

ಗುರುಮಠಕಲ್(ಯಾದಗಿರಿ):ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪಟ್ಟಣದ ರಸ್ತೆಗಳು ನದಿಯಂತಾಗಿವೆ. ಕಾಕಲವಾರ ಕ್ರಾಸ್​ನಿಂದ ಬಸ್ ನಿಲ್ದಾಣ ರಸ್ತೆ, ಸಿಹಿನೀರಿನ ವೃತ್ತ, ಸೇರಿದಂತೆ ಹಲವು ಕಡೆ ಮಳೆಯ ನೀರು ಹಳ್ಳದಂತೆ ಉಕ್ಕಿ ಹರಿದಿವೆ. ಬಹಳ ವರ್ಷಗಳ ನಂತರ ಸುರಿದ ಭಾರೀ ಮಳೆಗೆ ಪ್ರಸಿದ್ಧ ದಬದಬೆ ಜಲಪಾತ ಕೂಡ ಭೋರ್ಗರೆದು ನೋಡುಗರ ಕಣ್ಮನ ಸೆಳೆಯುತ್ತಿದೆ.

ನದಿಯಂತಾದ ಗುರುಮಠಕಲ್​ ರಸ್ತೆ

ಗುರುಮಠಕಲ್​ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೆರೆ ತುಂಬಿ ಹರಿಯುತ್ತಿದ್ದು ರಸ್ತೆಗಳೆಲ್ಲ ನದಿಗಳಂತೆ ಕಾಣುತ್ತಿವೆ. ನೀರು ರಸ್ತೆಗೆ ಬಂದ ಕಾರಣ ಬಸ್ಸುಗಳ ಸಂಚಾರವೂ ಸ್ಥಗಿತವಾಗಿದೆ. ಅಂಗಡಿಗಳಿಗೂ ನೀರು ನುಗ್ಗಿದ್ದು, ತುಂಬಿ ಹರಿಯುತ್ತಿರುವ ರಸ್ತೆಗಳಲ್ಲಿ ಜನರು ಓಡಾಡಲೂ ಭಯಪಡುವಂತಾಗಿದೆ.

ಇದನ್ನೂ ಓದಿ :ಮುದ್ದೇಬಿಹಾಳದಲ್ಲಿ ಭಾರಿ ಮಳೆ ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Last Updated :Aug 4, 2022, 12:38 PM IST

ABOUT THE AUTHOR

...view details