ಕರ್ನಾಟಕ

karnataka

ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಪರ ಪತ್ನಿ ಅಮರೇಶ್ವರಿ ನಾಮಪತ್ರ ಸಲ್ಲಿಕೆ

By

Published : Apr 20, 2023, 11:03 PM IST

ನಾಮಪತ್ರ ಸಲ್ಲಿಕೆ ನಂತರ ಗುರುಮಠಕಲ್​ದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದ ವೇಳೆ ಆಸ್ಪತ್ರೆಯಿಂದ ವಿಡಿಯೋಕಾಲ್ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಮಾತನಾಡಿದರು.

Amareshwari Chinchanasura spoke at a convention of Congress workers.
ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಅಮರೇಶ್ವರಿ ಚಿಂಚನಸೂರ ಮಾತನಾಡಿದರು.

ಯಾದಗಿರಿ:ಕಾಂಗ್ರೆಸ್ ಪಕ್ಷದಿಂದ ಮಾಜಿ ಎಂಎಲ್​ಸಿ ಬಾಬುರಾವ್ ಚಿಂಚನಸೂರ ಪರ ಅವರ ಪತ್ನಿ ಅಮರೇಶ್ವರಿ ಚಿಂಚನಸೂರ ಅವರು ಗುರುಮಠಕಲ್ ಪಟ್ಟಣದ ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿದರು. ನಂತರ ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶದಲ್ಲಿ ಆಸ್ಪತ್ರೆಯಿಂದ ವಿಡಿಯೋಕಾಲ್ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲಿದ್ದು ನಾನು ಮಂತ್ರಿಯಾಗುವುದು ಖಚಿತ ಎಂದರು. ಕಾಲಿಗೆ ಆದ ತೀವ್ರ ಗಾಯವು ಗುಣಮುಖವಾಗದ ಕಾರಣ ವೈದ್ಯರ ಸಲಹೆ ಮೇರೆಗೆ ಬರಲಾಗಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಲು ತಮಗೆ ಮತ ನೀಡುವಂತೆ ಮನವಿ ಮಾಡಿದರು.

ಬಿಜೆಪಿ ಪಕ್ಷದಲ್ಲಿ ಹಿಂದುಳಿದವರಿಗೆ ಸೂಕ್ತ ಸ್ಥಾನಮಾನ ಸಿಗದ ಕಾರಣ ನನಗೆ ನೀಡಿದ್ದ ಎಂಎಲ್ ಸಿ ಸ್ಥಾನ ಮತ್ತು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನ ಮತ್ತು ಅಮರೇಶ್ವರಿ ಚಿಂಚನಸೂರ ಅವರಿಗೆ ನೀಡಿದ್ದ ಕೇಂದ್ರ ಆಹಾರ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ.ಮುಂಬರುವ ದಿನಗಳಲ್ಲಿ ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ನಾನೇ ಮಂತ್ರಿಯಾಗುತ್ತೇನೆ ಎಂದು ತಿಳಿಸಿದರು.

ಸೇಡಂ ಕಾಂಗ್ರೆಸ್​ ಅಭ್ಯರ್ಥಿ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಬಿಜೆಪಿ ಪಕ್ಷದ ದುರಾಡಳಿತದಿಂದ ಜನತೆ ಬೇಸರಗೊಂಡಿದ್ದು, ಈ ಬಾರಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ನಾಡಿನ ಜನರ ಅಭಿವೃದ್ಧಿಗಾಗಿ ಕಾಂಗ್ರೇಸ್ ಪಕ್ಷವು ನಾಲ್ಕು ಗ್ಯಾರಂಟಿ ಕಾರ್ಡ್​ಗಳನ್ನು ನೀಡಿದೆ. ಪ್ರತಿ ಕಾರ್ಯಕರ್ತರು ಮನೆಮನೆಗೆ ತೆರಳಿ ಕಾಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ತಲುಪಿಸುವಂತೆ ಕೋರಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹರಿಕಾರರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕಾಗಿದೆ. ಪ್ರತಿಯೊಬ್ಬ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಸೆರಗೊಡ್ಡಿ ಮತಯಾಚಿದ ಅಮರೇಶ್ವರಿ ಚಿಂಚನಸೂರ: ನಾಮಪತ್ರ ಸಲ್ಲಿಸಿದ ನಂತರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅಮರೇಶ್ವರಿ ಚಿಂಚನಸೂರ ಮಾತನಾಡಿ, ಚಿಂಚನಸೂರ ಅವರ ಮೇಲೆ ಇಷ್ಟೊಂದು ಜನರು ಪ್ರೀತಿ ಅಭಿಮಾನ ತೋರಿಸುತ್ತಿರುವುದು ನನಗೆ ಮಾತುಗಳು ಬರುತ್ತಿಲ್ಲ ಎಂದು ಭಾವುಕರಾದರು. ಮತದಾರರು ಅವರಿಗೆ ಮತ ನೀಡಿ, ಗುರುಮಠಕಲ್ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕೆಂದು ಸೆರಗೊಡ್ಡಿ ಮತಯಾಚಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ದೊಡ್ಡಮನಿ, ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಫೂರ, ಗುರುಮಠಕಲ್ ಬ್ಲಾಕ್ ಅಧ್ಯಕ್ಷ ಕೃಷ್ಣಾ ಚಪೆಟ್ಲಾ, ಸೈದಾಪೂರ ಬ್ಲಾಕ್ ಅಧ್ಯಕ್ಷ ನಿರಂಜನರೆಡ್ಡಿ, ಬ್ಲಾಕ್ ಕಿಸನ್ ಅಧ್ಯಕ್ಷ ಆನಂದ ಬೋಯಿನ್, ಯಾದಗಿರಿ ನಿಯೋಜಿತ ಅಭ್ಯರ್ಥಿ ಚನ್ನಾರೆಡ್ಡಿ ತುನ್ನೂರು, ಡಾ.ಕಾಮಾರೆಡ್ಡಿ, ಶರಣಪ್ಪ ಮಟ್ಟೂರು, ಮರಿಗೌಡ ಹುಲಕಲ್, ಮಹಿಪಾಲರೆಡ್ಡಿ ಹತ್ತಿಕುಣಿ, ಯೋಗೇಶ ಬೆಸ್ತರ್ ಮತ್ತಿತರ ಮುಖಂಡರು ಇದ್ದರು.

ಇದನ್ನೂಓದಿ:ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್​ ಕಾರನ್ನ ಮತ್ತೊಮ್ಮೆ ಏರಿದ ಬಿಎಸ್​ವೈ.. ಏನಿದರ ವಿಶೇಷತೆ?

TAGGED:

ABOUT THE AUTHOR

...view details