ಕರ್ನಾಟಕ

karnataka

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ನದಿ ಪಾತ್ರದ ಹಳ್ಳಿಗಳಿಗೆ ಎಚ್ಚರಿಕೆ ರವಾನೆ

By

Published : Jul 27, 2023, 10:09 PM IST

Updated : Jul 27, 2023, 10:47 PM IST

ಬಸವಸಾಗರ ಜಲಾಶಯವು ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 33.31 ಟಿಎಂಸಿ ಇದ್ದು, ಅದರಲ್ಲಿ 26.42 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಬಸವಸಾಗರ ಜಲಾಶಯ ಪೂರ್ಣ ಭರ್ತಿಯಾಗಲು ಇನ್ನೂ 6.89 ಟಿಎಂಸಿ ಮಾತ್ರ ಬಾಕಿ ಇದೆ. 21 ಕ್ರಸ್ಟ್ ಗೇಟ್​ ಗಳಿಂದ 1 60 ಲಕ್ಷ ಕ್ಯೂಸೆಕ್​ ನೀರು ಕೃಷ್ಣಾ ನದಿಗೆ ಹರಿಬಿಡಲಾಗಿದೆ.

Basava Sagar Reservoir in Narayanpur
ನಾರಾಯಣಪುರದ ಬಸವಸಾಗರ ಜಲಾಶಯ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ

ಯಾದಗಿರಿ:ಮಹಾರಾಷ್ಟ ಸೇರಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಹಿನ್ನೆಲೆ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಬಸವಸಾಗರ ಜಲಾಶಯದಿಂದ 1 ಮೀಟರ್ ಎತ್ತರದಲ್ಲಿ 21 ಕ್ರಸ್ಟ್ ಗೇಟ್​ ಗಳ ಮೂಲಕ 1.50 ಲಕ್ಷ ಕ್ಯೂಸೆಕ್​ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ.

ಬಸವಸಾಗರ ಜಲಾಶಯವು ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 33.31 ಟಿ ಎಂ ಸಿ ಇದ್ದು, ಅದರಲ್ಲಿ 26.42 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಬಸವಸಾಗರ ಜಲಾಶಯ ಪೂರ್ಣ ಭರ್ತಿಯಾಗಲು 6.89 ಟಿಎಂಸಿ ನೀರು ಮಾತ್ರ ಬೇಕಿದೆ. 492.25 ಮೀ. ಎತ್ತರ ಜಲಾಶಯದಲ್ಲಿ ಸದ್ಯ 490.64 ಮೀಟರ್ ನೀರು ಸಂಗ್ರಹವಾಗಿದೆ.

ಕೃಷ್ಣಾಗೆ ನೀರು ಬಿಡುಗಡೆ, ನದಿಗಿಳಿಯದಂತೆ ಎಚ್ಚರಿಕೆ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್​ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಮೇಲಿನಗಡ್ಡಿ, ದೇವರಗಡ್ಡಿ, ಬೆಂಚಿಗಡ್ಡಿ, ನೀಲಕಂಠರಾಯನಗಡ್ಡಿ, ತಿಂಥಣಿ, ಬಂಡೋಳ್ಳಿ ಸೇರಿದಂತೆ ಇತರ ಹಳ್ಳಿಗಳ ಜನ ಜಾನುವಾರು ಹಾಗೂ ಮೀನುಗಾರರು ನದಿಗಿಳಿಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಒಂದು ವೇಳೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯದಿಂದ ಹೆಚ್ಚನ ಪ್ರಮಾಣದ ನೀರು ಬಸವಸಾಗರ ಜಲಾಶಯಕ್ಕೆ ಹರಿದು ಬಂದರೆ ಜಲಾಶಯದ ನೀರಿನ ಮಟ್ಟವನ್ನು ಕಾಯ್ದುಕೊಂಡು ಮತ್ತೆ ಹೆಚ್ಚು ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತದೆ ಎಂದು ಅಣೆಕಟ್ಟು ವಿಭಾಗಾಧಿಕಾರಿ ಪ್ರಕಾಶ ಮುದಗಲ್ ತಿಳಿಸಿದ್ದಾರೆ.

ಡಂಗುರ ಸಾರಿ ಸಾರ್ವಜನಿಕರಿಗೆ ಜಾಗೃತಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯುಸೇಕ್ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಕೊಡೇಕಲ್ ಪೊಲೀಸ್ ಠಾಣೆಯಿಂದ ಧ್ವನಿವರ್ಧಕ ಹಾಗೂ ಡಂಗುರ ಸಾರುವ ಮೂಲಕ ನದಿ ತೀರದ ವಿವಿಧ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಎಚ್ಚರಿಕೆಗಳು ?: ಜನ-ಜಾನುವಾರುಗಳು ನದಿಯ ತೀರಕ್ಕೆ ಬಿಡಬಾರದು, ಬಟ್ಟೆ ತೊಳೆಯುವುದಕ್ಕೆ ನದಿ ತೀರಕ್ಕೆ ಹೋಗಬಾರದು, ರೈತರು ತಮ್ಮ ತಮ್ಮ ಮೋಟಾರು ಹಾಗೂ ಪಂಪಸೆಟ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಹಾಗೂ ಮಕ್ಕಳು ನದಿಯಲ್ಲಿ ಈಜಾಡುವುದಕ್ಕೆ ಹೋಗಬಾರದು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ನೀರಿನ ಒಳ ಹರಿವು ಹೆಚ್ಚಳ: ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನೆಲೆ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಹಾಗಾಗಿ ಈಗಾಗಲೇ ಪೊಲೀಸ್ ಇಲಾಖೆಯಿಂದ ನದಿ ತೀರದ ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ನದಿ ತೀರಕ್ಕೆ ಯಾರೂ ಇಳಿಯದಂತೆ, ಜಾನುವಾರುಗಳನ್ನು ಬಿಡದಂತೆ ಸೂಚಿಸಲಾಗಿದೆ ಎಂದು ಯಾದಗಿರಿ ಜಿಲ್ಲೆಯ ಎಸ್ಪಿ ಡಾ. ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ :KRS Reservoir : 108 ಅಡಿ ತಲುಪಿದ ಕೆಆರ್‌ಎಸ್‌ ಅಣೆೆಕಟ್ಟೆ ನೀರಿನ ಮಟ್ಟ: ರೈತರು ಖುಷ್‌

Last Updated : Jul 27, 2023, 10:47 PM IST

ABOUT THE AUTHOR

...view details