ಕರ್ನಾಟಕ

karnataka

ಆ್ಯಂಬುಲೆನ್ಸ್​ನಲ್ಲೇ ಅವಳಿ ಗಂಡು ಮಕ್ಕಳಿಗೆ ಜನ್ಮ: ತಾಯಿ ಮಕ್ಕಳು ಸುರಕ್ಷಿತ

By

Published : Mar 23, 2021, 9:09 AM IST

Updated : Mar 23, 2021, 12:38 PM IST

ಆ್ಯಂಬುಲೆನ್ಸ್​ನಲ್ಲೇ ಗರ್ಭಿಣಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ.

woman gives birth to twin babies in ambulance
ಆ್ಯಂಬುಲೆನ್ಸ್​ನಲ್ಲೇ ಹೆರಿಗೆ

ಮುದ್ದೇಬಿಹಾಳ/ವಿಜಯಪುರ:ಆ್ಯಂಬುಲೆನ್ಸ್​ನಲ್ಲೇ ಮಹಿಳೆಯೊಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ‌ನೀಡಿದ ಘಟನೆ ತಾಲೂಕಿನ ಗಡಿ ಭಾಗದ ನಾರಾಯಣಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ನಾರಾಯಣಪೂರ ನಿವಾಸಿ ಕುಸುಮಾ ಅಂಬ್ಲಪ್ಪ ಹವಾಲ್ದಾರ್ ಎಂಬ ತುಂಬು ಗರ್ಭಿಣಿಯನ್ನು ನಾಲತವಾಡ ಆರೋಗ್ಯ ಕವಚ 108 ವಾಹನದ ಮೂಲಕ ಕೊಡೇಕಲ್ ಸರ್ಕಾರಿ ಆಸ್ಪತ್ರೆ ಸಾಗಿಸಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲಿ ಮಹಿಳೆಗೆ ಹೇರಿಗೆ ನೋವು ತೀವ್ರವಾಗಿದ್ದರಿಂದ ಆ್ಯಂಬುಲೆನ್ಸ್​ನಲ್ಲೇ ಇದ್ದ ತುರ್ತು ಚಿಕಿತ್ಸಾ ತಜ್ಞ ಶ್ರೀಶೈಲ ಹೂಗಾರ ಅವರು ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಗ್ಯ ಕವಚ ವಾಹನದ ಡೊಂಗ್ರಿಸಾಬ್ ಕೂಡಗಿ, ಆಶಾ ಕಾರ್ಯಕರ್ತೆ ರೇಣುಕಾ ಗದ್ದಗಿ ಇದ್ದರು. ಈ ವೇಳೆ ಮಾತನಾಡಿದ ಆರೋಗ್ಯ ಕವಚ ವಾಹನದ ಇಎಂಟಿ ಶ್ರೀಶೈಲ್ ಹೂಗಾರ, ಗರ್ಭಿಣಿ ಕುಸುಮಾ ಅವರು ಹೆರಿಗೆ ನೋವಿನಿಂದ ಬಳಲುತಿದ್ದರು. ಕೂಡಲೇ ಅಲ್ಲಿಯ ಆಶಾಕಾರ್ಯಕರ್ತೆ ಸಹಕಾರದಿಂದ ಸುರಕ್ಷಿತವಾಗಿ ಹೆರಿಗೆ ಮಾಡಲಾಯ್ತು. ಅವಳಿ ಮಕ್ಕಳಿಗೆ ತಾಯಿ ಜನ್ಮ ನೀಡಿದ್ದು ಎರಡೂ ಮಕ್ಕಳು ಹಾಗೂ ತಾಯಿ ಆರೋಗ್ಯದಿಂದ ಇದ್ದಾರೆ. ಸದ್ಯ ಅವರನ್ನು ಕೊಡೇಕಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಎಚ್ಚರ.. ಎಚ್ಚರ.. ಸ್ವಲ್ಪ ಯಾಮಾರಿದರೂ ಮಾಯವಾದೀತು ಕೂಡಿಟ್ಟ ಹಣ.!

Last Updated :Mar 23, 2021, 12:38 PM IST

ABOUT THE AUTHOR

...view details