ಕರ್ನಾಟಕ

karnataka

ಮುದ್ದೇಬಿಹಾಳ: ಆ್ಯಂಬುಲೆನ್ಸ್​ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

By

Published : Jan 3, 2021, 7:20 PM IST

ಮುದ್ದೇಬಿಹಾಳ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಮಹಿಬೂಬ ನಗರದಿಂದ ಗರ್ಭಿಣಿಯನ್ನು 108 ಆರೋಗ್ಯ ಕವಚ ವಾಹನದಲ್ಲಿ ಕರೆತರಲಾಗುತ್ತಿತ್ತು. ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾದಾಗ ಆ್ಯಂಬುಲೆನ್ಸ್​ನಲ್ಲಿದ್ದ ಇಎನ್‌ಟಿ ಶ್ರೀಶೈಲ ಹೂಗಾರ ಅವರು ಗರ್ಭಿಣಿ ರೇಷ್ಮಾ ಅತ್ತಾರ ಅವರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.

Woman gives birth to baby in ambulance
ಆ್ಯಂಬುಲೆನ್ಸ್​ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಮುದ್ದೇಬಿಹಾಳ:ಪಟ್ಟಣದ ಮಹಿಬೂಬ ನಗರದ ಮಹಿಳೆಯೊಬ್ಬರು ಆ್ಯಂಬುಲೆನ್ಸ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ನಡೆದಿದೆ.

ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಮಹಿಬೂಬ ನಗರದಿಂದ ಗರ್ಭಿಣಿಯನ್ನು 108 ಆರೋಗ್ಯ ಕವಚ ವಾಹನದಲ್ಲಿ ಕರೆತರಲಾಗುತ್ತಿತ್ತು. ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾದಾಗ ಆ್ಯಂಬುಲೆನ್ಸ್​ನಲ್ಲಿದ್ದ ಇಎನ್‌ಟಿ ಶ್ರೀಶೈಲ ಹೂಗಾರ ಅವರು ಗರ್ಭಿಣಿ ರೇಷ್ಮಾ ಅತ್ತಾರ ಅವರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.

ಸದ್ಯ ಮಗು, ತಾಯಿ ಆರೋಗ್ಯವಾಗಿದ್ದಾರೆ. ದೂರದರ್ಶನ ಕಲಾವಿದರೂ ಆಗಿರುವ ಶ್ರೀಶೈಲ ಹೂಗಾರ ಈಗಾಗಲೇ ಸಾವಿರಾರು ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ABOUT THE AUTHOR

...view details